Select Your Language

Notifications

webdunia
webdunia
webdunia
webdunia

ಮಕ್ಕಳಲ್ಲಿ ಉಲ್ಬಣಿಸುತ್ತಿರುವ ಬಾಯಿ ಹುಣ್ಣು...!

ಮಕ್ಕಳಲ್ಲಿ ಉಲ್ಬಣಿಸುತ್ತಿರುವ ಬಾಯಿ ಹುಣ್ಣು...!
bangalore , ಮಂಗಳವಾರ, 6 ಜೂನ್ 2023 (20:47 IST)
ವಾತಾವರಣದಲ್ಲಿನ ಬದಲಾವಣೆ ಹಾಗೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ 10 ದಿನಗಳಿಂದ ಎಲ್ಲೆಡೆ ಕೆಮ್ಮು, ನೆಗಡಿ, ಶೀತದ ಜತೆಗೆ ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ಹುಣ್ಣುಗಳು ಕಾಣಿಸಿಕೊಳ್ಳುತ್ತಿದ್ದು, ಶಾಲೆಗಳಲ್ಲಿ ಒಬ್ಬರಿಂದ ಒಬ್ಬರಿಗೆ ತೀವ್ರವಾಗಿ ಹರಡುತ್ತಿರುವುದು ಕಂಡುಬಂದಿದೆ.
 
 ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಮನೆಯಲ್ಲಿದ್ದ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಆದರೀಗ ವಾತಾವರಣ ಬದಲಾವಣೆಯಿಂದಾಗಿ ಕೈ, ಬಾಯಿ ಮತ್ತು ಕಾಲು ಹುಣ್ಣಿನ ಕಾರಣಕ್ಕೆ ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸಾಲುಗಟ್ಟಿರುವುದು ಸಾಮಾನ್ಯವಾಗಿದೆ. ಕಾಕ್ಸಾಕಿ ವೈರಸ್ನಿಂದ ಮಕ್ಕಳಲ್ಲಿ ಕೈಕಾಲು, ಬಾಯಿ ಹುಣ್ಣು ಕಾಣಿಸಿಕೊಂಡರೂ ಪರಿಣಾಮ ತೀವ್ರವಾಗಿರುವುದಿಲ್ಲ. ಹಾಗಾಗಿ ಇದಕ್ಕೆ ಈವರೆಗೂ ಯಾವುದೇ ಲಸಿಕೆ ಲಭ್ಯವಿಲ್ಲ. ಇದು 10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದೆ ಎಂದು ಆರೋಗ್ಯಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಮಳೆ ಆರ್ಭಟ