ಖಾಸಗಿ ಬಸ್ ಚಾಲಕನೊಬ್ಬ ತನ್ನ ಸಮಯ ಪ್ರಜ್ಞೆಯಿಂದ 70 ಪ್ರಮಾಣಿಕರ ಪ್ರಾಣ ಕಾಪಾಡಿದ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.
ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಈ ಘಟನೆ ನೆಡೆದಿದ್ದು, ಬೆಂಗಳೂರಿನಿಂದ ಹೊಸಕೋಟೆಗೆ ತೆರಳುತ್ತಿದ್ದ ಖಾಸಗಿ ಬಸ್ವೊಂದರ ಸ್ಟೇರಿಂಗ್ ರಾಡ್ ಕಟ್ ಆಗಿತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ ಗೋವಿಂದರಾಜು, ಸ್ಟೇರಿಂಗ್ ರಾಡ್ ಕಟ್ ಆಗುತ್ತಿದ್ದಂತೆ ರಸ್ತೆ ಬದಿ ನಿಲ್ಲಿಸಿ ಅನಾಹುತ ತಪ್ಪಿಸಿದ್ದಾರೆ.
ಸ್ಟೇರಿಂಗ್ ರಾಡ್ ಕಟ್ ಆಗಿದ್ದರಿಂದ ಬಸ್ ಪಲ್ಟಿಯಾಗ ಸಂಭವವಿತ್ತು. ಆದರೆ, ಪ್ರಯಾಣಿಕರಿಗೆ ಸ್ವಲ್ಪವೂ ತೊಂದರೆಯಾಗದಂತೆ ಚಾಲಕ ಎಲ್ಲರನ್ನೂ ಕಾಪಾಡಿದ್ದಾರೆ.
ಚಾಲಕ ಗೋವಿಂದರಾಜು ಸಮಯ ಪ್ರಜ್ಞೆಯಿಂದ ವಿಜಯದಶಮಿ ದಿನದಂದು ಭಾರೀ ಅನಾಹುತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ