Select Your Language

Notifications

webdunia
webdunia
webdunia
webdunia

ನಾಡಿನ ಜನತೆಗೆ ದಸರಾ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ

ನಾಡಿನ ಜನತೆಗೆ ದಸರಾ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ
ಮೈಸೂರು , ಮಂಗಳವಾರ, 11 ಅಕ್ಟೋಬರ್ 2016 (11:17 IST)
ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿನ ಜನತೆಯ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥಿಸಿದರು.
 
ಸುತ್ತೂರು ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾರಿ ದಸರಾ ಸಂದರ್ಭದಲ್ಲೂ ರಾಜ್ಯ ಬರಗಾಲ ಪರಿಸ್ಥಿತಿ ಎದುರಿಸುತ್ತಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಜನತೆ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಹಿಂಗಾರು ಮಳೆಯಾದರೂ ಚೆನ್ನಾಗಿ ಸುರಿದು ನಾಡಿನ ಜನತೆಯ ಸಂಕಷ್ಟವನ್ನು ದೂರ ಮಾಡಲಿ ಎಂದು ಪ್ರಾರ್ಥಿಸಿದರು. 
 
ಜಂಬೂ ಸವಾರಿಗೆ ಅರ್ಜುನನ ಬಳಗ ರೆಡಿ....
 
ಇಂದು ಸಂಜೆ ವೇಳೆಗೆ ನಾಡಿನ ಅಧಿದೇವತೆ ಚಾಮುಂಡಿಯನ್ನು ಹೊತ್ತು ಅರ್ಜುನ ತನ್ನ ಜೊತೆಗಾರರೊಂದಿಗೆ ಅರಮನೆ ನಗರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ. ಕೋಟ್ಯಾಂತರ ಜನರು ಐತಿಹಾಸಿಕ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯ್ತಿದ್ದು, ಮೈಸೂರಿನಲ್ಲಿ ದೇಶ ವಿದೇಶಗಳ ಪ್ರವಾಸಿಗರ ದಂಡೇ ಸೇರಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಜಂಬೂ ಸವಾರಿಗೆ ಅರ್ಜುನನ ಬಳಗ ರೆಡಿ...