Webdunia - Bharat's app for daily news and videos

Install App

ರಾಜ್ಯ ಮಟ್ಟದ ವ್ಹಾಲಿಬಾಲ್ ಕ್ರೀಡಾಕೂಟಕ್ಕೆ ಚಾಲನೆ

Webdunia
ಭಾನುವಾರ, 28 ಅಕ್ಟೋಬರ್ 2018 (19:19 IST)
2018-19ನೇ ಸಾಲಿನ‌ ರಾಜ್ಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆ‌ ಮಾಡಲಾಗಿದೆ.

ನಾಲ್ಕು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಗೆ ರಾಜ್ಯದ 31 ಜಿಲ್ಲೆಗಳು ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಹಿಡಿದು ರಾಜ್ಯದ ಒಟ್ಟು 32 ಬಾಲಕ ಮತ್ತು ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಇನ್ನು ಪ್ರತಿ ತಂಡದಲ್ಲಿ 12 ಕ್ರೀಡಾಪಟುಗಳು, ಓರ್ವ ವ್ಯವಸ್ಥಾಪಕರು ಪಾಲ್ಗೊಳ್ಳಲಿದ್ದು ಒಟ್ಟು
384 ಪುರುಷ ಕ್ರೀಡಾಪಟುಗಳು, 384 ಮಹಿಳಾ ಕ್ರೀಡಾಪಟುಗಳು ಸೇರಿ ಒಟ್ಟು 768 ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವ್ಯವಸ್ಥಾಪಕರಿಗೆ ಅಭ್ಯುದಯ ಕಾಲೇಜು, ಮುದ್ದೇಬಿಹಾಳದವರಿಂದ ವಸತಿ, ಊಟದ ಆತಿಥ್ಯ ಮಾಡಲಾಗಿದೆ. ಜೊತೆಗೆ ಅಭ್ಯೂದಯ ಕಾಲೇಜಿನ ಆವರಣದಲ್ಲಿಯೇ ಬಾಲಕರಿಗೆ ಎರಡು ಆಟದ ಮೈದಾನ ಹಾಗೂ ಬಾಲಕಿಯರಿಗೆ ಎರಡು ಆಟದ ಮೈದಾನ ಸಿದ್ದಪಡಿಸಲಾಗಿದ್ದು, ಕ್ರೀಡಾಭಿಮಾನಿಗಳು ಕುಳಿತು ಕೊಳ್ಳಲು ಉತ್ತಮ ಗ್ಯಾಲರಿಯನ್ನು ಸಿದ್ದಪಡಿಸಲಾಗಿದೆ. ಒಟ್ಟು 5000ಜನ ಕುಳಿತು ಪಂದ್ಯಾವಳಿಯನ್ನು ಇಲ್ಲಿ ವಿಕ್ಷಿಸಬಹುದಾಗಿದೆ.

ಈ ಕ್ರೀಡಾಕೂಟ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ವಿಜ್ಞಾನ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆಯಲಿದ್ದು, ಇಲ್ಲಿ ವಿಜೇತವಾದ ಪ್ರಥಮ ಹಾಗೂ ದ್ವೀತಿಯ ತಂಡದ ಕ್ರೀಡಾ ಪಟುಗಳಿಗೆ ರಾಷ್ಟ್ರ ಮಟ್ಟದ ತಂಡದಲ್ಲಿ ಸ್ಪರ್ದಿಸುವ ಅವಕಾಶ ಕಲ್ಪಿಸಲಾಗುವದು ಎಂದು ಆಯೋಜಕರು ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments