Webdunia - Bharat's app for daily news and videos

Install App

ಸಿಧ್ಧಾಪುರ ನಗರದಲ್ಲಿ ಕುಡಿಯುವ ನೀರಿಗೆ ಪರದಾಟ..!

Webdunia
ಭಾನುವಾರ, 2 ಏಪ್ರಿಲ್ 2023 (20:45 IST)
ಬಿಡಬ್ಲ್ಯೂಎಸ್ಎಸ್ಬಿ ಮಹಾ ನಿರ್ಲಕ್ಷ್ಯ ಮತ್ತೆ ಮತ್ತೆ ಅನಾವರಣಗೊಳುತ್ತಿದೆ, ಬೆಂಗಳೂರಿನಲ್ಲಿ ಕುಡಿಯವ ನೀರಿಗೆ ಹಾಹಕಾರ ಶುರುವಾಗಿದ್ದು, ವಾರಕ್ಕೊಮ್ಮೆ ಬರುವ ಕಲುಷಿತ ನೀರು ಸೇವನೆಯಿಂದ ಇಲ್ಲಿನ ನಿವಾಸಿಗಳು ದಿನ ನಿತ್ಯ ಆಸ್ಪತ್ರೆಗೆ  ಸೇರುತ್ತಿದ್ದಾರೆ.. ಪ್ಲೀಸ್ ಕುಡಿಯಲು ನೀರು ಕೊಡಿ ಅಂತ ಅಂಗಲಾಚ್ತಿರೋ ನಿವಾಸಿಗಳ ಅಳಲು ಜೋರಾಗಿದೆ .

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಪರದಾಡ್ತಿರೋ ವಿಚಾರ ನಿಜಕ್ಕೂ ಶಾಕಿಂಗ್.. ಸಿಧ್ಧಾಪುರ ನಗರದಲ್ಲಿ ಕುಡಿಯುವ ನೀರು ಸಿಗದೇ ಜನ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ತಿದ್ದಾರೆ. ಬಿಡಬ್ಲ್ಯೂಎಸ್ಎಸ್ಬಿ ಕಾವೇರಿ ನೀರಿನ ಪೂರೈಕೆಯನ್ನು ಮನೆಗಳಿಗೆ ನೀಡಿದೆ, ಆದ್ರೆ ನೀರಿನ ಪೈಪುಗಳು ಸುರಕ್ಷಿತವಾಗಿಲ್ಲದೆ ಕಂಡ ಕಂಡವರ ಕಾಲಿಗೆ ಸಿಲುಕುವ ಸ್ಥಿತಿಯಲ್ಲಿದೆ. ಇನ್ನೂ ಈ ಕಾವೇರಿ ನೀರು ವಾರಕ್ಕೊಮ್ಮೆ ಬರ್ತಿದ್ದು, ಕೆಟ್ಟು ವಾಸನೆ ಹಾಗೂ ಕಲುಷಿತ ನೀರು ಬರ್ತಿದೆ. ಈ ನೀರನ್ನ ಸೇವಿಸಿದ   ಏರಿಯಾದ ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.

 ಒಂದು ಟ್ಯಾಂಕರ್ ನೀರಿಗೆ ೫೦೦ ರೂಪಾಯಿಂದ ಆರು ನೂರು ರೂಪಾಯಿ ಹಣ ಕೊಟ್ಟು ಖರೀದಿ ಮಾಡಲಾಗ್ತಿದೆ. ಇನ್ನೂ ಕೆಲವರು ಶುಧ್ದ ನೀರಿನ ಘಟಕಗಳ ಮೊರೆ ಹೋಗುತ್ತಿದ್ದಾರೆ, ಇದು ಸುಮಾರು ವರ್ಷಗಳಿಂದ ಇರುವ ಸಮಸ್ಯೆ. ಇತ್ತಿಚೇಗಷ್ಟೆ ಮತ್ತೆ ಹೊಸದಾಗಿ ನೀರಿನ ಸಂಪರ್ಕವನ್ನ ಮನೆಗಳಿಗೆ ಕಲ್ಪಿಸಲಾಗಿದೆ. ಆದ್ರೆ ಬರೋ ನೀರಿನ ಬಣ್ಣ ನೋಡಿದ್ರೆನೆ ವಾಂತಿ ಬರುತ್ತೆ. ಇನ್ನು ನೀರು ಕೆಲ ಸಮಯದ ನಂತರ ಸೋಪು ಮಿಶ್ರಿತಾ ನೀರಿನ ಹಾಗೆ ಬದಲಾಗುತ್ತಿದ್ದು ಕೆಮಿಕಲ್ ಮಿಕ್ಸ್  ಆಗಿದ್ಯ ಅನ್ನೋ ಅನುಮಾನ ಶುರುವಾಗಿದೆ, ಇನ್ನೂ ನಿವಾಸಿಗಳು ಎಷ್ಟೇ ದೂರು ನೀಡಿದ್ರು ಬಿಡಬ್ಲ್ಯೂಎಸ್ಎಸ್ಬಿ  ರೆಸ್ಪಾನ್ಸ್ ಮಾಡದಿರುವುದು ದುರದೃಷ್ಟಕರ. ನಗರದಲ್ಲಿ ಶುದ್ದ ಕುಡಿಯುವ ನೀರಿಗಂತ ಕೋಟಿ ಕೋಟಿ ಅನುದಾನ ನೀಡಿದ್ರೂ, ನೀರಿನ ಅಭಾವ ತಪ್ಪಿಲ್ಲ. ಸಿಧ್ಧಾಪುರ ನಗರ ನಿವಾಸಿಗಳ ನೀರಿನ ದಾಹಕ್ಕೆ ಸ್ಪಂದಿಸದ ಬಿಡಬ್ಲ್ಯೂಎಸ್ಎಸ್ಬಿ ಗೆ ಹಿಡಿ ಶಾಪ ಹಾಕುತ್ತಿವುದು ಅಂತೂ ನಿಜ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರಹ್ಮಾವರ: ಗಂಡ ಕೋರ್ಟ್ ವಿಚಾರಣೆಗೆ ಹಾಜರು, ಇತ್ತ ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆ

ಬೀದಿನಾಯಿಗಳು ನನಗೆ ಪ್ರಪಂಚದಾದ್ಯಂತ ಖ್ಯಾತಿ ತಂದುಕೊಟ್ಟಿತು: ಜಡ್ಜ್‌ ವಿಕ್ರಮ್ ನಾಥ್ ಹಾಸ್ಯ ಚಟಾಕಿ

ಉಪರಾಷ್ಟ್ರಪತಿ ನಿವಾಸ ಖಾಲಿ ಮಾಡಿದ ಜಗದೀಪ್ ಧಂಖರ್‌, ಹೋಗಿದ್ದೆಲ್ಲಿ ಗೊತ್ತಾ

ಮೊಮ್ಮಕ್ಕಳಾಡಿಸಿರುವ 55ನೇ ವಯಸ್ಸಿನ ಮಹಿಳೆ 17ನೇ ಮಗುವಿಗೆ ಜನ್ಮ, ಗ್ರಾಮವೇ ಶಾಕ್‌

ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳದಿರಿ: ವಿಜಯೇಂದ್ರ ಎಚ್ಚರ

ಮುಂದಿನ ಸುದ್ದಿ
Show comments