ಗುಜರಿ ಪಾಲಾಗುವ ದಾರಿಯಲ್ಲಿ ಡ್ರೆಜ್ಜರ್

Webdunia
ಬುಧವಾರ, 30 ಅಕ್ಟೋಬರ್ 2019 (15:17 IST)
ನವಮಂಗಳೂರು ಬಂದರಿನಲ್ಲಿ ಹೂಳು ತೆಗೆಯಲು ಮುಂಬೈಯಿಂದ ಬಂದಿದ್ದ ಡ್ರೆಜ್ಜರ್ ಹಡಗು ‘ಭಗವತಿ ಪ್ರೇಮ್’ ಗುಜರಿ ಪಾಲಾಗುವ ಸಂಶಯವಿದೆ.

ಮುಂಬೈಯ ಮರ್ಕೆಟರ್ ಸಂಸ್ಥೆಯ ಹಡಗು ಇದಾಗಿದ್ದು, ಕ್ಯಾರ್ ಚಂಡ ಮಾರುತದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಾಗ ಅಪಾಯಕ್ಕೆ ಸಿಲುಕಿತ್ತು. ಅದನ್ನು ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರ ಕಿನಾರೆಯಿಂದ 300 ರಿಂದ 500 ಮೀಟರ್ ದೂರಕ್ಕೆ ರಾತ್ರಿ ತಂದು ನಿಲ್ಲಿಸಲಾಗಿದೆ.

ವಸ್ತುಗಳ ಸಾಗಾಟ: ಅಪಾಯಕ್ಕೆ ಸಿಲುಕಿರುವ ಬಾರ್ಜ್‌ನಲ್ಲಿದ್ದವರನ್ನು ಸೋಮವಾರ ರಾತ್ರಿ 9 ಗಂಟೆ ವೇಳೆಗೆ ಟಗ್ ಮೂಲಕ ಸ್ಥಳಾಂತರಿಸಲಾಗಿದ್ದು, ಇದಕ್ಕೆ ಮೊದಲು ಬಾರ್ಜ್‌ನಲ್ಲಿ ಉರಿಯುತ್ತಿದ್ದ ದೀಪಗಳನ್ನು ನಂದಿಸಲಾಗಿದೆ. ಅದರಲ್ಲಿದ್ದ ವಸ್ತುಗಳನ್ನು ಇನ್ನೊಂದು ಬಾರ್ಜ್‌ನಲ್ಲಿ ಕೊಂಡೊಯ್ಯಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಡ್ರೆಜ್ಜರ್ ಮರಳಿನಲ್ಲಿ ಸಾಕಷ್ಟು ಹೂತು ಹೋಗಿರುವ ಸಾಧ್ಯತೆಯಿದೆ. ಇದನ್ನು ಪುನಃ ದುರಸ್ತಿಗೊಳಿಸಿ ಸಮುದ್ರಕ್ಕೆ ಮರಳಿ ಎಳೆಯುವುದು ವೆಚ್ಚದಾಯಕ ಹಾಗೂ ಕಷ್ಟಕರ. ಹಾಗಾಗಿ ಇದನ್ನು ಈ ಭಾಗದಲ್ಲಿಯೇ ಸ್ಕ್ರಾಪ್ ಮಾಡುವ ಸಾಧ್ಯತೆ ನಿಚ್ಚಳವಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ಮೀನುಗಾರರು.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ನವದೆಹಲಿ ದಟ್ಟ ಮಂಜು, ಹವಾಮಾನ ಎಫೆಕ್ಟ್‌, ಇಂದು ಕೂಡಾ ವಿಮಾನ ಪ್ರಯಾಣಿಕರಿಗೆ ಶಾಕ್

48 ಗಂಟೆ ಕೆಲಸ ಮಾಡಿದರೆ 3 ದಿನ ವೀಕಾಫ್: ಕೇಂದ್ರದಿಂದ ಕಾರ್ಮಿಕ ಹೊಸ ನಿಯಮ

ದರ್ಶನ್ ಅರೆಸ್ಟ್ ಆದಾಗ ಪುತ್ರ ವಿನೀಶ್ ಪರಿಸ್ಥಿತಿ ಹೇಗಾಗಿತ್ತು: ವಿವರಿಸಿದ ಪತ್ನಿ ವಿಜಯಲಕ್ಷ್ಮಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿಗೆ ಬಿಗ್ ರಿಲೀಫ್

ಮುಂದಿನ ಸುದ್ದಿ
Show comments