Publish Date: Thu, 15 Apr 2021 (10:50 IST)
Updated Date: Thu, 15 Apr 2021 (10:52 IST)
ಬೆಂಗಳೂರು : ಕೊರೊನಾ ಕಂಟ್ರೋಲ್ ಗೆ ಟಫ್ ರೂಲ್ಸ್. ಇಂದು ತಜ್ಞರಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ. ವರದಿ ಬಗ್ಗೆ ಸಿಎಂ ಜೊತೆ ಚರ್ಚಿಸಿ ಟಫ್ ರೂಲ್ಸ್ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಜನರೇ ಕಠಿಣ ಕ್ರಮ ವಿಧಿಸಿಕೊಂಡರೆ ಕೊರೊನಾ ತಡೆಯಬಹುದು. ಬೇರೆ ರಾಜ್ಯದಲ್ಲಿ ಕೊರೊನಾ ಸಾವು ಏರುತ್ತಿದೆ. ಸಭೆ ಸಮಾರಂಭ ಇದ್ರೆ 2-3 ತಿಂಗಳು ಮುಂದೂಡಿ. ಸಮಾರಂಭ ಮುಂದೂಡುವುದರಿಂದ ಜೀವ ಹೋಗಲ್ಲ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಿಸಿಲ್ಲ. ಕೊರೊನಾ ಪ್ರಮಾಣ 0.5 ರಿಂದ 0.6ರಷ್ಟಿದೆ. ತಕ್ಷಣಕ್ಕೆ ಚಿಕಿತ್ಸೆ ಪಡೆದರೆ ಸಾವು ತಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.