Webdunia - Bharat's app for daily news and videos

Install App

ಆರೋಗ್ಯ ಕೊಡಿ ಎಂದರೆ ಜೀವ ತೆಗೆಯುವ ಆಸ್ಪತ್ರೆ ನಿರ್ಮಾಣ ಮಾಡಿದೆ ಸರ್ಕಾರ: ಡಾ ಸಿಎನ್ ಅಶ್ವತ್ಥನಾರಾಯಣ

Krishnaveni K
ಶುಕ್ರವಾರ, 30 ಮೇ 2025 (15:28 IST)
ಬೆಂಗಳೂರು: ಆರೋಗ್ಯ ಕೊಡಿ ಎಂದು ಆಸ್ಪತ್ರೆಗೆ ಬಂದರೆ ಇವರು ಜೀವ ತೆಗೆಯುವ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ರಾಜಕೀಯ ಪ್ರೇರಿತವಾಗಿ, ನೈತಿಕತೆ ಇಲ್ಲದೆ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.
 
ಇÀಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಔಷಧಿಗಳನ್ನು ಉಚಿತವಾಗಿ ಒದಗಿಸಲು ಸರಕಾರದಿಂದ ಆಗುತ್ತಿಲ್ಲ; ಉಚಿತ ಔಷಧಿ ನೀಡದೆ ಐವಿ ಫ್ಲೂಯಿಡ್ ಕೊಟ್ಟು ಬಾಣಂತಿಯರನ್ನು ಕೊಂದ ಕೀರ್ತಿ ಪಡೆದ ಸರಕಾರ ರಾಜ್ಯದಲ್ಲಿದೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಜೀ ಅವರ ಯೋಜನೆಯಡಿ ಜನೌಷಧಿ ಕೇಂದ್ರಗಳಲ್ಲಿ ಶೇ 80ರಷ್ಟು ಕಡಿಮೆ ದರದಲ್ಲಿ ಔಷಧಿ ಸಿಗುತ್ತಿತ್ತು ಎಂದು ಅವರು ನುಡಿದರು.
 
ಸರಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿರುವ ಸರಕಾರವು ಜನವಿರೋಧಿ ಮತ್ತು ಆರೋಗ್ಯ ವ್ಯವಸ್ಥೆಗೆ ವಿರೋಧಿ ಎಂದು ಟೀಕಿಸಿದರು. ಇದನ್ನು ಖಂಡಿಸಿ ಇಂದು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
 
ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಆರೋಗ್ಯ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ. ಕಳಪೆ ಔಷಧಿ, ನಕಲಿ ಔಷಧಿ ಕುರಿತು ತಿಳಿಸಿದರೆ ನಾನೇನೂ ಮಾಡಲಾಗದು ಎನ್ನುತ್ತಾರೆ ಎಂದು ದೂರಿದರು. ಔಷಧಿ, ಮಾತ್ರೆ ಇಲ್ಲ ಎಂದರೆ ನಾನೇನೂ ಮಾಡಲಾಗದು ಎನ್ನುತ್ತಾರೆ; ಈ ಥರ ಏನೂ ಮಾಡಲಾಗದೆ ಇದ್ದರೆ ಯಾಕೆ ಆರೋಗ್ಯ ಸಚಿವರಾಗಿದ್ದೀರಿ ಎಂದು ಕೇಳಿದರು.
 
ಆರೋಗ್ಯ ಸಚಿವರಿಗೆ ಮತ್ತು ಈ ಕೊಲೆಗಡುಕ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಮೌನಿಯಾಗಿದ್ದಾರೆ. ಸಾವುಗಳಿಗೆ ಉತ್ತರ ಕೊಡದ ಸರಕಾರವು ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ; ಔಷಧಿ, ವ್ಯವಸ್ಥೆಗಳೂ ಇಲ್ಲ ಎಂದು ಆಕ್ಷೇಪಿಸಿದರು.
 
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಧರ್ಮಸ್ಥಳ, ಅನಾಮಿಕ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಹೊಸ ಬಾಂಬ್‌

ಪಕ್ಷದ ಶಿಸ್ತು ಉಲ್ಲಂಘನೆ: ಶಾಸಕಗೆ ಶಿವಗಂಗಾಗೆ ಬಿಸಿ ಮುಟ್ಟಿಸಿದ ಡಿಕೆ ಶಿವಕುಮಾರ್‌

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ಮುಂದಿನ ಸುದ್ದಿ
Show comments