Webdunia - Bharat's app for daily news and videos

Install App

ಆಧುನಿಕ ಭಾರತದ ಪಿತಾಮಹ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ : ಸಿಎಂ

Webdunia
ಶುಕ್ರವಾರ, 17 ಡಿಸೆಂಬರ್ 2021 (19:26 IST)
ಡಾ: ಬಿ.ಆರ್.  ಅಂಬೇಡ್ಕರ್  ಆಧುನಿಕ ಭಾರತದ ಪಿತಾಮಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  
 
 ಅವರು ಇಂದು ಬೆಳಗಾವಿಯ ಸುವರ್ಣ ಸೌಧ ಮುಂಭಾಗದಲ್ಲಿರುವ ಬಸ್ತವಾಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.
 
ಅವರಿಂದಾಗಿ ನಾವು ಇಂದು ವಿಧಾನ ಸಭೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ ರಚನೆ, ಗಣತಂತ್ರ ತರದೇಹೋಗಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ, ಕಾನೂನು 
ಸುವ್ಯವಸ್ಥೆ, ಶಾಂತಿ ಸಮೃದ್ಧಿ  ಇರುತ್ತಿರಲಿಲ್ಲ ಎಂದರು.
 
ಅವರು ರಚಿಸಿರುವ ಸಂವಿಧಾನ ಬಹಳ ಉತ್ಕೃಷ್ಟವಾಗಿರುವಂಥದ್ದು. ಬೇರೆ ದೇಶಗಳ ಸಂವಿಧಾನಗಳಿಗಿಂತ ಹೆಚ್ವು ಜನಪರ, ಮಾನವೀಯ ಗುಣಗಳಿರುವ, ದೇಶವನ್ನು ಕಟ್ಟುವ ಸಂವಿಧಾನ. ಹಾಗಾಗಿ ವಿಶ್ವಕ್ಕೆ ಮಾದರಿ ಎನಿಸುವ ಸಂವಿಧಾನ ನಮ್ಮದು.ಜನರು ನಿರಂತರವಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
 
ನಾವು ಕೇವಲ ಮತ ಹಾಕಿದ್ರೆ ಸಾಲು. ಮತ ಹಾಕಿದ ಮೇಲೆ ವ್ಯವಸ್ಥೆ ಜನಪರವಾಗಿನಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಗಮನಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು ಮಾತ್ರವಲ್ಲದೇ, ಸಾಮಾನ್ಯ ಜನರೂ ಮಾಡಬೇಕು. ಅದನ್ನು ಮಾಡಿದಾಗ ದೇಶ ಸಮೃದ್ಧಿ ಗೊಂದಲು ಸಾಧ್ಯ. ಅದು ಪಾಲುಗೊಳ್ಳುವಿಕೆಯ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ. ಅದು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಯಕೆ ಆಗಿತ್ತು. ಅವರ ಎಲ್ಲ ವಿಚಾರಗಳನ್ನು ಸಂಪೂರ್ಣವಾಗಿ ಒಪ್ಪಿ ಸಂವಿಧಾನದನ್ವಯ ಆಡಳಿತ ಮಾಡುತ್ತಿದ್ದೇವೆ. ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳನ್ನು ನಿಮ್ಮ ನೆಚ್ಚಿನ ಧರ್ಮಗ್ರಂಥ ಯಾವುದೆಂದು ಕೇಳಿದಾಗ ಅವರು ಸಂವಿಧಾನವೇ ನನ್ನ ಧರ್ಮ ಗ್ರಂಥ ಎಂದು ಹೇಳಿದ್ದಾರೆ. ನಮ್ಮ ನಾಯಕರ ಆದರ್ಶಗಳನ್ನು ಮುಂದಿಟ್ಟುಕೊಂಡು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
 
ಸಂಜಯ ಪಾಟೀಲರು ಹೋರಾಟಗಾರರು. ಜನಪರ ಕೆಲಸಗಳಲ್ಲಿ ಸದಾ ಮುಂದಿರುತ್ತಾರೆ. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡುವ ಸಂದರ್ಭದಲ್ಲಿ 107 ಎಕರೆ ಜಮೀನು ಪಡೆಯಲು ಬಸ್ತವಾದ ಮತ್ತು ಹಲಗ ಗ್ರಾಮದ ರೈತರಿಂದ ಪಡೆದದ್ದು. ಒಂದೇ ದಿನದಲ್ಲಿ 107 ಎಕರೆ ಜಮೀನನ್ನು ಪಡೆದ ಶ್ರೇಯಸ್ಸು   ಅಂದಿನ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಶಾಸಕ ಸಂಜಯ ಪಾಟೀಲ್ ಅವರಿಗೆ  ಸಲ್ಲಬೇಕು ಎಂದರು.  
 
ಬಸ್ತವಾಡ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಹಾಗೂ ಪ್ರೌಢ ಶಾಲೆ ನೀಡುವುದು ನಮ್ಮ ಧರ್ಮ. ಅದನ್ನು ಇಂದೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಶಾಶ್ವತ ಕುಡಿಯುವ ನೀರಿ ವ್ಯವಸ್ಥೆ ಮಂಜೂರು ಮಾಡುವುದಾಗಿ ತಿಳಿಸಿದರು. 
 
ಹೊಸ ಪ್ರೌಢ ಶಾಲೆಯನ್ನು  ಮಂಜೂರು ಮಾಡುವ ನೀತಿ ಬಂದಿಲ್ಲ. ನೀತಿ ರೂಪಿಸಿದ ಕೂಡಲೇ  ಜಮೀನು ಗುರುತಿಸಿ  ಬಸ್ತವಾಡ ಗ್ರಾಮಕ್ಕೆ ಹೊಸ ಪ್ರೌಢ ಶಾಲೆಯನ್ನು ಮಂಜೂರು ಮಾಡುವ ಭರವಸೆಯನ್ನು ನೀಡಿದರು. 
 
 ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments