Select Your Language

Notifications

webdunia
webdunia
webdunia
webdunia

ಪತ್ನಿಯ ನಡತೆ ಸರಿ ಇಲ್ಲವೆಂದು ಕೊಲೆ

ಪತ್ನಿಯ ನಡತೆ ಸರಿ ಇಲ್ಲವೆಂದು ಕೊಲೆ
ಬೆಂಗಳೂರು , ಮಂಗಳವಾರ, 12 ಜುಲೈ 2022 (14:26 IST)
ಪತ್ನಿಯ ನಡತೆ ಸರಿ ಇಲ್ಲವೆಂದು ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆಸಿಕೊಂಡು ಕೊಲೆ ಮಾಡಿ ಸುಟ್ಟು ಹಾಕಿದ ಪ್ರಕರಣವನ್ನು ಭೇದಿಸಿರುವ ಕೆಂಗೇರಿ ಠಾಣೆ ಪೊಲೀಸರು ಆರೋಪಿ ಪತಿ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
 
ಮೂಲತಃ ಯಾದಗಿರಿ ಜಿಲ್ಲೆಯ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ ಅಲಿಯಾಸ ಮೊಹಮ್ಮದ್ ರಫೀಕ್(29) ಜೆಸಿಬಿ ಚಾಲಕ.
ದೊಡ್ಡಬಳ್ಳಾಪುರ ತಾ. ಕರೀಂ ಸೊಣ್ಣೇನಹಳ್ಳಿ ಗ್ರಾಮದ ಸ್ನೇಹಿತ ಪ್ರಜ್ವಲ್(21) ಬಂಧಿತರು.
 
ಕೆಂಗೇರಿ ಉಪನಗರದ ಸನ್‍ಸಿಟಿಯಲ್ಲಿ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ- ನಗೀನಾ ಖಾನಂ ದಂಪತಿ ವಾಸವಾಗಿರುತ್ತಾರೆ ನಡತೆ ಸರಿಯಿಲ್ಲವೆಂದು ಆಗಾಗ್ಗೆ ಪತ್ನಿಯೊಂದಿಗೆ ಮೊಹಮ್ಮದ್ ಜಗಳವಾಡುತ್ತಿದ್ದನು. ಜು. 2ರಂದು ರಾತ್ರಿ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ತನಗೆ ಸಹಾಯ ಮಾಡುವಂತೆ ಪ್ರಜ್ವಲ್‍ನ್ನು ಕೇಳಿದ್ದಾನೆ.
 
ಅಂದು ರಾತ್ರಿ ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆ, ನೈಸ್ ಬಿಡ್ಜ್ ಸಮೀಪದ ಧನ ನಾಯಕನ ಹಳ್ಳಿ ಕಡೆಗೆ ಹೋಗುವ ನಿರ್ಜನ ಪ್ರದೇಶದ ಬಳಿ ಪತ್ನಿಯನ್ನು ಕರೆಸಿಕೊಂಡಿದ್ದಾನೆ. ಏನೋ ಮಾತನಾಡಲು ಕರೆದಿರಬಹುದೆಂದು ನಗೀನಾ ಖಾನಂ ಹೋಗುತ್ತಿದ್ದಂತೆ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ.
ನಂತರ ಆರೋಪಿ ಮೊಹಮದ್ ತನ್ನ ಚಹರೆ ಯಾರಿಗೂ ಗೊತ್ತಾಗಬಾರದೆಂದು ತಲೆ ಬೋಳಿಸಿಕೊಂಡು ಬಿಜಾಪುರಕ್ಕೆ ಪರಾರಿಯಾಗಿದ್ದ.
 
ಮಾರನೇ ದಿನ ಜು.3ರಂದು ಬೆಳಗ್ಗೆ 11.15ರ ಸುಮಾರಿನಲ್ಲಿ ಧನನಾಯಕನ ಹಳ್ಳಿ ಕಡೆಗೆ ಹೋಗುವ ರಸ್ತೆ ಪಕ್ಕದ ನಿರ್ಜನ ಪ್ರದೇಶದ ಹೊಂಗೆ ಮರದ ಕೆಳಗೆ ಪೆÇದೆಯಲ್ಲಿ ಮಹಿಳೆ ಶವವನ್ನು ಗಮನಿಸಿ ಮೋಹನ್ ಕುಮಾರ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಡ್ ರೂಮ್ ರೊಮ್ಯಾಂಟಿಕ್​​ ಸೀನ್ ಚಿತ್ರೀಕರಣಕ್ಕೆ ಗಂಡನ ಹಠ.. ಇಷ್ಟವಿಲ್ಲದ ಹೆಂಡ್ತಿ ಏನು ಮಾಡಿದ್ಳು?