Publish Date: Tue, 12 Jul 2022 (14:24 IST)
Updated Date: Tue, 12 Jul 2022 (15:12 IST)
ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಬೆಡ್ ರೂಮ್ನ ರೊಮ್ಯಾಂಟಿಕ್ ಸೀನ್ ಚಿತ್ರೀಕರಣಕ್ಕೆ ಗಂಡನೊಬ್ಬ ಹೆಂಡತಿ ಮೇಲೆ ಒತ್ತಡ ಹಾಕಿರುವ ಘಟನೆ ನಡೆದಿದೆ.
ಭಾರತೀಯ ಸಂಸ್ಕೃತಿಯಲ್ಲಿ ಅದಕ್ಕೆ ಮಹತ್ವದ ಸ್ಥಾನ ಸಹ ಇದೆ. ಆದರೆ, ಈ ಪ್ರಣಯ ನಾಲ್ಕು ಜನರ ಕಣ್ಣಿಗೆ ಬಿದ್ದರೆ? ಮಾನ-ಮರ್ಯಾದೆ ಮಾತ್ರವಲ್ಲ. ಸಂಸಾರದಲ್ಲಿ ಅಲ್ಲೊಲ್ಲ ಕಲ್ಲೊಲ್ಲ ಆಗುತ್ತದೆ. ಸದ್ಯ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ಅಂತಹದೊಂದು ಘಟನೆ ನಡೆದಿದ್ದು, ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ತಿಂಗಳ ಹಿಂದೆ ಯುವತಿಯೊಬ್ಬಳು ಕಾಕಿನಾಡು ಜಿಲ್ಲೆಯ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದರು. ವಧುವಿನ ಮನೆಯವರು ಅಪಾರ ಪ್ರಮಾಣದಲ್ಲಿ ವರದಕ್ಷಿಣೆ ನೀಡಿ, ಅದ್ಧೂರಿಯಾಗಿ ಮದುವೆ ಸಹ ಮಾಡಿಕೊಟ್ಟಿದ್ದರು. ಕೆಲಕಾಲ ದಾಂಪತ್ಯ ಜೀವನ ಸರಾಗವಾಗಿ ನಡೆದಿದೆ. ಒಳ್ಳೆಯ ಅಳಿಯ ಸಿಕ್ಕನೆಂದು ಹುಡುಗಿಯ ಪೋಷಕರು ಖುಷಿ ಪಡಲು ಶುರು ಮಾಡಿದ್ದಾರೆ. ಇಷ್ಟರಲ್ಲೇ ಆತನ ನಿಜ ಬಣ್ಣ ಬಯಲಾಗಲು ಶುರುವಾಗಿದೆ.