Select Your Language

Notifications

webdunia
webdunia
webdunia
webdunia

ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಹುಷಾರ್: ಎಸ್‌ಪಿಗೆ ಕರಂದ್ಲಾಜೆ ವಾರ್ನಿಂಗ್

ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಹುಷಾರ್: ಎಸ್‌ಪಿಗೆ ಕರಂದ್ಲಾಜೆ ವಾರ್ನಿಂಗ್
ಉಡುಪಿ: , ಗುರುವಾರ, 13 ಜುಲೈ 2017 (18:57 IST)
ಬಿಜೆಪಿಯ ನಮ್ಮ ಕಾರ್ಯಕರ್ತರನ್ನು ಮುಟ್ಟಿದ್ರೆ ಹುಷಾರ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಂಸದೆ ಶೋಭಾ ಕರಂದ್ಲಾಜೆ ಧಮಕಿ ಹಾಕಿದ್ದಾರೆ.
 
ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯನ್ನು ವಿರೋಧಿಸಿ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಬಾ ಕರಂದ್ಲಾಜೆ, ನಾವು ಮೀಟಿಂಗ್ ಕರೆದರೆ ಸ್ಥಳಕ್ಕೆ ಬರುವುದಿಲ್ಲ. ನೀವೇನು ಸರಕಾರದ ಎಸ್‌ಪಿಯೋ ಅಥವಾ ಕಾಂಗ್ರೆಸ್ ಪಕ್ಷದ ಎಸ್‌ಪಿಯೋ ಕಾಂಗ್ರೆಸ್ ಪಕ್ಷದ ಸರಕಾರ ಕೇವಲ 10 ತಿಂಗಳು ಅಧಿಕಾರದಲ್ಲಿರುತ್ತದೆ ಎನ್ನುವುದು ಮರೆಯಬೇಡಿ ಎಂದು ಗುಡುಗಿದ್ದಾರೆ. 
 
ಪೊಲೀಸ್ ಇಲಾಖೆಗೆ ಏನು‌ ಪಾಠ ಕಲಿಸಬೇಕು ಎನ್ನುವುದು ನಮಗೆ ಗೊತ್ತಿದೆ. ಸರಕಾರಗಳು ಬರುತ್ತವೆ, ಹೋಗುತ್ತವೆ. ಆದ್ರೆ  ನೀವು ಅನ್ಯಾಯ ಮಾಡಬೇಡಿ. ಜನತೆಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪಗೆ ಬಹಿರಂಗ ಸವಾಲು ಹಾಕಿದ ಸಿಎಂ ಸಿದ್ದರಾಮಯ್ಯ