Publish Date: Thu, 13 Jul 2017 (18:33 IST)
Updated Date: Thu, 13 Jul 2017 (18:46 IST)
ರಾಜ್ಯ ಸರ್ಕಾರದ ಇದುವರೆಗಿನ ಅಭಿವೃದ್ಧಿ ವಿಷಯದ ಚರ್ಚೆಗೆ ಮಾಜಿ ಸಿಎಂ ಯಡಿಯೂರಪ್ಪಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ ನೀಡಿದ್ದಾರೆ.
4 ವರ್ಷಗಳಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎಂದು ಹೇಳಿಕೊಂಡು ಬರುತ್ತಿರುವ ಯಡಿಯೂರಪ್ಪ ಒಂದೇ ವೇದಿಕೆಗೆ ಬರಲಿ. ಕೇಂದ್ರದ ನರೇಂದ್ರಮೋದಿ ಸರ್ಕಾರ ಯಾವ ಭರವಸೆ ನೀಡಿತ್ತು. ಎಷ್ಟು ಈಡೇರಿಸಿದೆ ಮತ್ತು ನಾವು ಏನೇನು ಭರವಸೆಯನ್ನ ನೀಡಿದ್ದೆವು. ಎಷ್ಟು ಈಡೇರಿಸಿದ್ದೇವೆ ಎಂಬುದನ್ನ ಬಹಿರಂಗವಾಗಿ ಚರ್ಚಿಸೋಣ ಎಂದು ಸವಾಲು ಹಾಕಿದ್ದಾರೆ.
ಇದೇವೇಳೆ, ಶೋಭಾ ಕರಂದ್ಲಾಜೆ ತಾಳಮೇಳ ಇದ್ದಂಗೆ ಅಂತಾ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯನವರ ಬೆಂಬಲಿಗರಿಂದಲೇ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯಾಗಿದೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪಾಪ ಅವರಿಗೆ ರಾಜಕೀಯವಾಗಿ ಇನ್ನೂ ಪ್ರಭುದ್ಧತೆ ಬಂದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ