Select Your Language

Notifications

webdunia
webdunia
webdunia
webdunia

ಗ್ಯಾರಂಟಿಗಾಗಿ ರೈತರ ಬದುಕು ಬಲಿ ಕೊಡಬೇಡಿ-ಮಾಜಿ ಸಚಿವ ಎಚ್.ಡಿ.ರೇವಣ್ಣ

ಗ್ಯಾರಂಟಿಗಾಗಿ ರೈತರ ಬದುಕು ಬಲಿ ಕೊಡಬೇಡಿ-ಮಾಜಿ ಸಚಿವ ಎಚ್.ಡಿ.ರೇವಣ್ಣ
bangalore , ಗುರುವಾರ, 14 ಸೆಪ್ಟಂಬರ್ 2023 (15:01 IST)
ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ. ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿ ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಆದರೆ ಈ ಕಾಂಗ್ರೆಸ್‌ ಸರ್ಕಾರ ರೈತರ ಮನೆ ಹಾಳಾದ್ರು ಪರವಾಗಿಲ್ಲ, ಬೇಕಾದರೇ ಬೀದಿಪಾಲಾಗಲಿ ನಮಗೆ ಗ್ಯಾರಂಟಿ ಯೋಜನೆ ಈಡೇರಿಸುವುದೇ ಮುಖ್ಯ ಎನ್ನುವಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು. ಹಾಸನದಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಕಷ್ಟದಲ್ಲಿದ್ದು, ನಿಮ್ಮ ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ. ಸಂಕಷ್ಟಕ್ಕೆ ಸಿಲುಕಿರೊ ರೈತರ ನೆರವಿಗೆ ಸರ್ಕಾರ ಬರಬೇಕು. 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. 75 ಸಾವಿರ ಹೆಕ್ಟೇರ್ ಜಾಗದಲ್ಲಿ ರಾಗಿ ಬೆಳೆಯಲಾಗಿದೆ. ಒಟ್ಟು ಸುಮಾರು 2 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಬಹುತೇಕ ನಾಶವಾಗಿದೆ. ಇದುವರೆಗೂ ಸರಕಾರವು ಗಮನ ನೀಡಿ ಪರಿಹಾರ ನೀಡಿರುವುದಿಲ್ಲ. ರೈತರು ಹಾಳು ಬಿದ್ದು ಹೋಗಲಿ ಎನ್ನುವ ಪರಿಸ್ಥಿತಿಗೆ ಬಂದಿದೆ. ಕೇವಲ ಗ್ಯಾರಂಟಿ ಕಡೆ ಗಮನ ಕೊಡಲಾಗಿದ್ದು, ನಾವೇನಾದ್ರೂ ಮಾತನಾಡಿದ್ರೆ ಜೆಡಿಎಸ್ ಮುಗಿದು ಹೋಗುತ್ತೆ. ಅದಕ್ಕೆ ಅವರಿವರ ಬಳಿ ಹೋಗುತ್ತಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.. ಮೊದಲು ರೈತರನ್ನು ಉಳಿಸಿ ಅವರ ಬೆಳೆಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಸಿಬಿ ಕಚೇರಿಯಲ್ಲಿ ಚೈತ್ರಾ ಎನ್‌ಕ್ವೈರಿ