Publish Date: Mon, 09 Oct 2023 (16:11 IST)
Updated Date: Mon, 09 Oct 2023 (16:17 IST)
ಕಾಂಗ್ರೆಸ್ ಶಾಸಕ ಷಡಕ್ಷರಿ ನಾನು ಮಾತನಾಡಿದ ಸಂದರ್ಭ ಬೇರೆ,ಸಾರ್ವಜನಿಕರು ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ್ರು.ಹಾಗಾಗಿ ನಾನು ಅಲ್ಲಿ ಅನುದಾನದ ಬಗ್ಗೆ ಹೇಳಿದ್ದೆ.ಬಜೆಟ್ ಮುಗಿದಿದೆ ಮುಂದೆ ಅವರು ಹೆಚ್ಚು ಕೊಡ್ತಾರೆ ಅಂದಿದ್ದೆ,ಐದು ಗ್ಯಾರೆಂಟಿ ಇರೋದ್ರಿಂದ ಮಲಗಿಸಿದಂತಾಗಿದೆ ಎಂದಿದ್ದೆ,ಅಂದ್ರೆ ಗ್ಯಾರೆಂಟಿಗಳಿಗೆ ಹೆಚ್ಚಿನ ಹಣ ಹೋಗಲಿದೆ.ಹಾಗಾಗಿ ನಮಗೆ ಹೆಚ್ಚು ಸಿಗ್ತಿಲ್ಲ ಎಂದಿದ್ದೆ.ನಾವು ಎಲ್ಲೂ ಅಸಮಾಧಾನ ವ್ಯಕ್ತಡಿಸಿಲ್ಲ.ಎಲ್ಲ ಶಾಸಕರಿಗೆ ಅನುದಾನ ಸಿಗ್ತಿದೆ.ನನಗಂತೂ ಹೆಚ್ಚಿನ ಅನುದಾನ ಸಿಗ್ತಿದೆ.ನಮ್ಮಲ್ಲಿ ರೆಬೆಲ್ ಇಲ್ಲ .ಸರ್ಕಾರದಲ್ಲಿ ಬೇಕಾದನ್ನ ಮಾಡಿ ಅಂತ ಹೇಳ್ತೇವೆ.ಅದನ್ನ ನೀವು ಬೇರೆ ರೀತಿ ಅರ್ಥೈಸಿಕೊಂಡ್ರೆ ಹೇಗೆ ?ಸಭೆಯಲ್ಲಿ ನಡೆದ ವಿಚಾರ ನಿಮಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಷಡಕ್ಷರಿ ಹೇಳಿದ್ದಾರೆ.