Publish Date: Fri, 09 Aug 2019 (14:27 IST)
Updated Date: Fri, 09 Aug 2019 (14:30 IST)
ಧಾರವಾಡ : ನೆರೆ ಸಂತ್ರಸ್ತರಿಗೆ ಸರ್ಕಾರ ನೀಡುವ ಸಣ್ಣ ಪರಿಹಾರ ಸ್ವೀಕರಿಸಬೇಡಿ ಎಂದು ಸ್ವಪಕ್ಷದ ವಿರುದ್ಧವೇ ಧಾರವಾಡ ಬಿಜೆಪಿ ಶಾಸಕ ಅಮೃತ ದೇಸಾಯಿ ಹೇಳಿದ್ದಾರೆ.
ಧಾರವಾಡ ತಾಲೂಕಿನ ಕರಡಿಗುಡ್ಡದಲ್ಲಿ ನೆರೆ ಸಂತ್ರಸ್ತರ ಜೊತೆ ಮಾತನಾಡಿದ ಅವರು, ‘ಸರ್ಕಾರ ನೀಡುವ 1000, 2000 ರೂ ಪರಿಹಾರವನ್ನ ಸ್ವೀಕರಿಸಬೇಡಿ. ಸರ್ಕಾರವೇನಾದರೂ ಹೆಚ್ಚಿನ ಪರಿಹಾರ ನೀಡದಿದ್ದರೆ, ನಾನೇ ನನ್ನ ಜಮೀನು ಮಾರಿ ನಿಮಗೆ ಪರಿಹಾರ ನೀಡುವೆ’ ಎಂದು ಭರವಸೆ ನೀಡಿದ್ದಾರೆ.
ಅಲ್ಲದೇ ‘2 ದಿನಗಳಲ್ಲಿ ಪರಿಹಾರದ ಹಣ ನಿಮ್ಮ ಮನೆಗೆ ತಲುಪುತ್ತೆ. ಯಾರೂ ಸಹ ಧೃತಿಗೆಡಬೇಡಿ, ನಮ್ಮೊಂದಿಗೆ ನಾನಿದ್ದೇನೆ’ ಎಂದು ಅವರು ನೆರೆ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದಾರೆ.