Daily Horoscope

Select Your Language

Notifications

webdunia
webdunia
webdunia
webdunia

ನೀವು ಕೆಲಸ ಮಾಡೋದು MLAಗಾಗಿನಾ, ಜನರಿಗಾಗಿನಾ: ಅಧಿಕಾರಿಗೆ ಹೆಚ್‌ಡಿ ಕುಮಾರಸ್ವಾಮಿ ತರಾಟೆ, Video

Minister HD Kumaraswamy
Photo Credit X
ಮಂಡ್ಯ:  ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಈ ವೇಳೆ ಮಹಿಳಾ ಅಧಿಕಾರಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡ ಕುಮಾರಸ್ವಾಮಿ ಅವರು ನೀವು ಕೆಲಸ ಮಾಡೋದು ಎಂಎಲ್‌ಎಗಾಗಿನಾ, ಜನರಿಗಾಗಿನಾ ಎಂದು ಕೇಳಿದ್ದಾರೆ. 

ಮದ್ದೂರಿನಲ್ಲಿ ಆಟೋ ಸ್ಟ್ಯಾಂಡ್ ತೆರವು ಹಾಗೂ ಕಾಮಗಾರಿಗೆ ಅಡ್ಡಿಪಡಿಸಿದ ವಿಚಾರವಾಗಿ ನಗರಸಭೆ ಕಮಿಷನರ್ ರಾಧಿಕಾ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, “ನೀವು ಕೆಲಸ ಮಾಡೋದು MLAಗಾಗಿನಾ, ಜನರಿಗಾಗಿನಾ?” ಎಂದು ಪ್ರಶ್ನೆ ಮಾಡಿದರು. 

ಕೇಂದ್ರ ಸರ್ಕಾರದ ಯೋಜನೆಗಳ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ರಾಜಕೀಯ ಒತ್ತಡಕ್ಕೆ ಮಣಿದು ಯೋಜನೆಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹಕ್ಕೆ ನಲುಗಿದ ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌