Select Your Language

Notifications

webdunia
webdunia
webdunia
webdunia

ಎಚ್‌ಡಿ ಕುಮಾರಸ್ವಾಮಿ 3ವರ್ಷದಲ್ಲಿ ಯಾವುದಾದ್ರೂ ದಾಖಲೆ ಬಿಡುಗಡೆ ಮಾಡಿದ್ದಾರಾ

MLA Cheluvarayaswamy
Photo Credit X
ಬೆಂಗಳೂರು: ನೈಸ್‌ ಯೋಜನೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಏನು ದಾಖಲಾತಿ ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಸವಾಲೆಸೆದರು. 

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿ. 

ಅವರು ಇದುವರೆಗೂ  ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಹೇಳಿದರು, ಕಳೆದ 3 ವರ್ಷದಲ್ಲಿ ಯಾವುದಾದರೂ ದಾಖಲೆ ಬಿಡುಗಡೆ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು. 

ನೈಸ್ ಕಂಪನಿ ವಿಚಾರದಲ್ಲಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿ ಕ್ಯಾಬಿನೆಟ್ ಗೆ ಹೋಗ್ತಾರೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ಮಾತ್ರ ಇರುತ್ತಾರೆ. ಅದು ಹೇಗೆ ಉಕ್ಕು ಕೈಗಾರಿಕಾ ಇಲಾಖೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ವಿಜಯವಾಡದಲ್ಲಿ ಫ್ಯಾಕ್ಟರಿ ಕೊಡೋದು ಪ್ರಧಾನಮಂತ್ರಿಗಳ ಭರವಸೆ ಆಗಿತ್ತು ಮಾಡಿದ್ರು. ಆದರೆ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಏನ್ ಮಾಡಿದ್ದಾರೆ ಎಂದು ಹೇಳಲಿ.  

ಹೆಚ್‌ಎಂಟಿ ಲಾಭ ಮಾಡುತ್ತಿದೆ. ಎಲ್ಲಿಗೆ ಹೋಯ್ತು ಗಿಫ್ಟ್? ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ? ಅವರು ದುಡ್ಡು ಕೊಟ್ಟು ತಗೊಂಡರೆ ಏನು ತಪ್ಪು ಬಿಡಿ. ಅವರ ಅವಧಿ ಎಷ್ಟು ದಿನ ಇದೆ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಹೆಚ್‌ಡಿಕೆ ವಿರುದ್ಧ ಕಿಡಿಕಾರಿದರು. 




Share this Story:

Follow Webdunia kannada

ಮುಂದಿನ ಸುದ್ದಿ

ಎಂಥಾ ಜಾಗಕ್ಕೆ ಕಚ್ಚಿಬಿಡ್ತು ಪಿಟ್ ಬುಲ್ ನಾಯಿ: ಮಹಿಳೆಯ ನೋವು ಊಹಿಸಲೂ ಅಸಾಧ್ಯ Video