Select Your Language

Notifications

webdunia
webdunia
webdunia
webdunia

ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಸಾವಿಗೆ ಕಾರಣ ಯಾರು ಗೊತ್ತೆ?

ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಸಾವಿಗೆ ಕಾರಣ ಯಾರು ಗೊತ್ತೆ?
ಚಿಕ್ಕಮಗಳೂರು , ಗುರುವಾರ, 27 ಅಕ್ಟೋಬರ್ 2016 (14:11 IST)
ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಳ್ಳಲು ಅಪಹರಣಕ್ಕೊಳಗಾದ ಉದ್ಯಮಿ ತೇಜಸ್‌ನೇ ನೇರ ಕಾರಣ ಎಂದು ಪ್ರಕರಣದಲ್ಲಿ ಬಂಧಿತನಾಗಿರುವ ನಟರಾಜ್ ಆರೋಪಿಸಿದ್ದಾನೆ.
 
ಲಂಚ ಪ್ರಕರಣದಲ್ಲಿ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರನ್ನು ಸಿಲುಕಿಸಲು ಉದ್ಯಮಿ ತೇಜಸ್‌ ಹನ್ನಾರ ನಡೆಸಿದ್ದ. ಹೇಳಬೇಕೆಂದರೇ ತೇಜಸ್ ಅಪಹರಣವೇ ಆಗಿರಲಿಲ್ಲ. ಆತ ಆತನ ಸ್ನೇಹಿತನ ಜೊತೆ ಬೆಂಗಳೂರಿಗೆ ಹೋಗಿದ್ದ. ಅಪಹರಣವೇ ನಾಟಕವಾಗಿತ್ತು ಎಂದು ಚಿಕ್ಕಮಗಳೂರಿನಲ್ಲಿ ಪೊಲೀಸ್‌ರ ಮುಂದೆ ಬಾಯಬಿಟ್ಟಿದ್ದಾನೆ.
 
ಯಾಕೆ ಕಲ್ಲಪ್ಪರನ್ನು ಟಾರ್ಗೆಟ್ ಮಾಡಿದ್ದು.........
 
ಉದ್ಯಮಿ ತೇಜಸ್‌ ಕ್ರಿಕೆಟ್ ಬೆಟ್ಟಿಂಗ್ ದಂದೆಯಲ್ಲಿ ತೊಡಗಿದ್ದ. ಇತನಿಗೆ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರು ವಾರ್ನಿಂಗ್ ನೀಡಿದ್ದರು. ಹೀಗಾಗಿ ಲಂಚ ಪ್ರಕರಣದಲ್ಲಿ ಅವರನ್ನು ಸಿಲುಕಿಸಲು ತೇಜಸ್ ಸಂಚು ರೂಪಿಸಿದ್ದ ಎಂದು ಅಪಹರಣ ಪ್ರಕರಣದಲ್ಲಿ ಬಂಧಿತನಾಗಿರುವ ನಟರಾಜ್ ಹೇಳಿಕೆ ನೀಡಿದ್ದಾನೆ. 
 
ವ್ಯಕ್ತಿಯೋರ್ವನನ್ನು ರೌಡಿಗಳಿಂದ ಅಪಹರಣ ಮಾಡಿಸಿ ಹತ್ತು ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಚಿಕ್ಕಮಗಳೂರ್ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರು ಜುಲೈ 5ರಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಹಬ್ಬಕ್ಕೆ ಬರಲೊಲ್ಲೆ ಎಂದ ಕನ್ನಡತಿ ಶಿಲ್ಪಾ ಶೆಟ್ಟಿ..!