Select Your Language

Notifications

webdunia
webdunia
webdunia
webdunia

ಕನ್ನಡದ ಹಬ್ಬಕ್ಕೆ ಬರಲೊಲ್ಲೆ ಎಂದ ಕನ್ನಡತಿ ಶಿಲ್ಪಾ ಶೆಟ್ಟಿ..!

ಕನ್ನಡದ ಹಬ್ಬಕ್ಕೆ ಬರಲೊಲ್ಲೆ ಎಂದ ಕನ್ನಡತಿ ಶಿಲ್ಪಾ ಶೆಟ್ಟಿ..!
ಬೆಳಗಾವಿ , ಗುರುವಾರ, 27 ಅಕ್ಟೋಬರ್ 2016 (14:03 IST)

ಬೆಳಗಾವಿ: ಪ್ರಸ್ತುತ ವರ್ಷ ಬೆಳಗಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಹಾಲಿವುಡ್ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ.
 

ಕನ್ನಡದ ಚೆಲುವೆ ಶಿಲ್ಪಾ ಶೆಟ್ಟಿ ಅವರನ್ನು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಆಚರಿಸಬೇಕೆಂದು ಜಿಲ್ಲಾಡಳಿತ ನಿರ್ಧರಿಸಿತ್ತು. ವಿದೇಶಗಳಲ್ಲಿ ಕನ್ನಡದ ಪತಾಕೆಯನ್ನು ಹಾರಿಸಿದ ಶಿಲ್ಪಾ ಶೆಟ್ಟಿ ಅವರನ್ನು ಕರೆಸಿದರೆ, ಕನ್ನಡದ ಹಬ್ಬಕ್ಕೆ ಇನ್ನಷ್ಟು ಕಳೆ ಬರುವುದಲ್ಲದೆ, ವಿದೇಶದಲ್ಲಿ ಕನ್ನಡ ಮತ್ತಷ್ಟು ಕೀರ್ತಿ ಪಡೆಯುತ್ತದೆ ಎನ್ನುವುದು ಜಿಲ್ಲಾಧಿಕಾರಿ ಎನ್. ಜೈರಾಮ ಅವರ ಮುಂದಾಲೋಚನೆಯಾಗಿತ್ತು. ಅದರಂತೆ, ಶಿಲ್ಪಾ ಶೆಟ್ಟಿ ಅವರನ್ನು ರಾಜ್ಯೋತ್ಸವದ ಮೆರವಣಿಗೆಗೆ ಕರೆತರುವ ಪ್ರಯತ್ನ ಮಾಡಲಾಗಿತ್ತು. ಅದಕ್ಕೆ ಶಿಲ್ಪಾ ಶೆಟ್ಟಿ ಒಪ್ಪಿಗೆಯನ್ನೂ ನೀಡಿದ್ದರು. ಆದರೆ, ಕನ್ನಡದ ಹಬ್ಬ ಹತ್ತಿರ ಬರುತ್ತಿದ್ದಂತೆ ಕೆಲವು ತಾಂತ್ರಿಕ ಕಾರಣಗಳನ್ನು ಒಡ್ಡಿ, ಬರಲಾಗದು ಎಂದು ತಿಳಿಸಿದ್ದಾರೆ. ಇದರಿಂದಾಗಿ ಶಿಲ್ಪಾ ಶೆಟ್ಟಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಇದರಿಂದಾಗಿ ಶಿಲ್ಪಾ ಶೆಟ್ಟಿಯ ಕಾರ್ಯಕ್ರಮ ರದ್ದಾಗಿದೆ.

 

ಶಿಲ್ಪಾ ಶೆಟ್ಟಿ ಬರದಿದ್ದರೇನಂತೆ, ಅದಕ್ಕೆ ಬದಲಾಗಿ ಇನ್ನಷ್ಟು ರಂಜನೀಯವಾಗಿ ಕನ್ನಡದ ಹಬ್ಬ ಆಚರಿಸಬೇಖೆಂದು ಪಣತೊಟ್ಟ ಜಿಲ್ಲಾಡಳಿತ ನೆಂಬರ್ 1ರ ಬದಲಾಗಿ, ಮೊದಲನೇ ವಾರ ಬೆಳಗಾವಿಯ ಸರ್ದಾರ ಮೈದಾನದಲ್ಲಿ ಅದ್ಧೂರಿ ರಸ ಮಂಜರಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ. ಆ ವೈಭವದ ಕಾರ್ಯಕ್ರಮಕ್ಕೆ ಖ್ಯಾತ ಸಂಗೀತ ನಿರ್ದೇಶಕರೊಬ್ಬರನ್ನು ಕರೆಯಿಸಲು ಚಿಂತನೆ ನಡೆಸಿದೆ. ಇದರಿಂದ ಗಡಿ ನಾಡು ಬೆಳಗಾವಿಯಲ್ಲಿ ಕನ್ನಡದ ಹಬ್ಬ ವಿಜೃಂಭಿಸಲಿದೆ. ಹೀಗೆ ಜಿಲ್ಲಾಧಿಕಾರಿ ಜಯರಾಮ್ ಅವರು ವೈವಿಧ್ಯಮಯ ಕಾರ್ಯಕ್ರಮ ನಡೆಸುವ ಮೂಲಕ ಬೆಳಗಾವಿಯನ್ನು ಕನ್ನಡಮಯವನ್ನಾಗಿಸಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಯೊಬ್ಬ ದೇಶಪ್ರೇಮಿ ನೋಡಲೇಬೇಕಾದ ವಿಡಿಯೋ.