ಯಾವ ಸಂಸದರಿಗೆ ಶನಿಕಾಟ ಆರಂಭವಾಗಿದೆ ಗೊತ್ತಾ?

ಗುರುವಾರ, 14 ಮಾರ್ಚ್ 2019 (16:29 IST)
ಚುನಾವಣೆ ಹತ್ತಿರ ಬರುತ್ತಿರುವಂತೆ ಜನಪ್ರತಿನಿಧಿಗಳಿಗೆ ಗ್ರಹಗಳ ಕಾಟ ಶುರುವಾಗಿದೆಯಂತೆ.

ಸಂಸದ ಪ್ರಕಾಶ್ ಹುಕ್ಕೇರಿಗೆ ಶನಿ ಕಾಟ ಆರಂಭವಾಗಿದೆಯಂತೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಪ್ರಕಾಶ್ ಹುಕ್ಕೇರಿ ತಮಗೆ ಶನಿಕಾಟ ಆರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಈ ರೀತಿಯಾಗಿ ಹುಕ್ಕೇರಿ ಹೇಳಿಕೊಂಡಿದ್ದಾರೆ.

ಬೆಳಗಾವಿ ಕಾಂಗ್ರೆಸ್ ನಗರ ಅದ್ಯಕ್ಷ ರಾಜು ಸೇಠ್ ಬಳಿ ಈ ಹೇಳಿಕೆ ನೀಡಿದ್ದಾರೆ. ನನಗೆ ಸದ್ಯಕ್ಕೆ ಶನಿ ಕಾಟ ಆರಂಭವಾಗಿದೆ.
ಕಳೆದ ಮೂವತ್ತೈದು ವರ್ಷಗಳಿಂದ ಗುರು, ಶನಿಕಾಟ ಇದ್ದೇ ಇದೆ. ಈಗ ಏರಿರುವ ಶನಿ ಹೊಸದಲ್ಲ ಅಂತ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿಕೊಂಡಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚುನಾವಣಾ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಭೀಮ್ ಸೇನೆ ಮುಖ್ಯಸ್ಥನ ಬಂಧನ...