ಗಡಿ ಜಿಲ್ಲೆಯಲ್ಲಿ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ರಂಗೋತ್ಸವ ಸಮಾರಂಭ ಗಮನ ಸೆಳೆಯಿತು.
ಚಾಮರಾಜನಗರದ ಜೆ ಎಸ್ ಎಸ್ ಮಹಾವಿದ್ಯಾಪೀಠದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ರಂಗೋತ್ಸವ-2018 ಎಂಬ 3 ದಿನಗಳ ಕಾರ್ಯಕ್ರಮ ನಡೆಯಿತು.
ಚಾಮರಾಜನಗರದಲ್ಲಿ ನಡೆದ ರಂಗೋತ್ಸವ ಕಾರ್ಯಕ್ರಮವನ್ನು ಪ್ರೊ. ಹೆಚ್. ಎಸ್. ಉಮೇಶ್ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಕ್ಕಳು ಪಠ್ಯಕ್ರಮದೂಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆಯನ್ನು ಹೊರಚಲ್ಲಬೇಕು. ನಾಟಕ, ಕಲಾರಂಗ, ತರಂಗ. ಡ್ರಾಮಾ ಮುಂತಾದ ಚಟುವಟಿಕೆಗಳು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಒಳ್ಳೆಯ ಕಲಾವಿದರಾಗುವ ನಿಟ್ಟಿನಲ್ಲಿ ಮುಂದೆ ಸಾಗಬೇಕಂದರು.