Select Your Language

Notifications

webdunia
webdunia
webdunia
webdunia

ದೇಶದಲ್ಲಿ ಪೆಟ್ರೋಲ್​ಗೆ ಅತ್ಯಂತ ಕಡಿಮೆ ಬೆಲೆ ಇರುವುದು ಎಲ್ಲಿ ಗೊತ್ತಾ?

ದೇಶದಲ್ಲಿ ಪೆಟ್ರೋಲ್​ಗೆ ಅತ್ಯಂತ ಕಡಿಮೆ ಬೆಲೆ ಇರುವುದು ಎಲ್ಲಿ ಗೊತ್ತಾ?
bangalore , ಭಾನುವಾರ, 5 ಡಿಸೆಂಬರ್ 2021 (19:23 IST)
ಕಳೆದ ನವೆಂಬರ್ 4 ರಂದು ಅಂದರೆ ದೀಪಾವಳಿ ಮುನ್ನಾದಿನ ಕೇಂದ್ರ ಸರ್ಕಾರ ಪೆಟ್ರೋಲ್ -ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆಯಾಗಿದೆ. ಅಂದಿನಿಂದಲೂ ಭಾರತದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂದು (ಡಿ.5) ಕೂಡ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ, ಯಾವುದೇ ಪ್ರಮುಖ ನಗರಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ.
ಅಂದಹಾಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊನ್ನೆಯೇ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದು, ದೇಶದಲ್ಲೂ ಪೆಟ್ರೋಲ್​-ಡೀಸೆಲ್​ ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಕಳೆದ ನವೆಂಬರ್​ 4ರಂದು ಅಂದರೆ ದೀಪಾವಳಿ ಮುನ್ನಾದಿನ ಕೇಂದ್ರ ಸರ್ಕಾರ ಪೆಟ್ರೋಲ್​-ಡೀಸೆಲ್​​ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದೆ. ಅಂದಿನಿಂದಲೂ ಭಾರತದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂದು (ಡಿ.5) ಕೂಡ ಪೆಟ್ರೋಲ್​-ಡೀಸೆಲ್​ ಬೆಲೆ ಸ್ಥಿರವಾಗಿದ್ದು, ಯಾವುದೇ ಪ್ರಮುಖ ನಗರಗಳಲ್ಲೂ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಅಂದಹಾಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೊನ್ನೆಯೇ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದು, ದೇಶದಲ್ಲೂ ಪೆಟ್ರೋಲ್​-ಡೀಸೆಲ್​ ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಸದ್ಯಕ್ಕಂತೂ ಯಾವುದೇ ಚೇಂಜ್​ ಮಾಡಿಲ್ಲ.
ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿದ ಮೇಲೆ, ಬಿಜೆಪಿ ಸರ್ಕಾರವಿರುವ ಎಲ್ಲ ರಾಜ್ಯಗಳೂ ಕೂಡ ತಮ್ಮ ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದ್ದವು. ಹಾಗೇ ಕೆಲವೇ ದಿನಗಳ ಹಿಂದ ದೆಹಲಿಯ ಆಪ್​ ಸರ್ಕಾರ ಕೂಡ ಪೆಟ್ರೋಲ್​ ಮೇಲಿನ ವ್ಯಾಟ್​ (VAT-ಮೌಲ್ಯವರ್ಧಿತ ತೆರಿಗೆ)ನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 8 ರೂ.ಕಡಿಮೆಯಾಗಿದೆ. ಆದರೆ ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ರಾಜಸ್ಥಾನದಲ್ಲಿ ಸಿಕ್ಕಾಪಟೆ ದುಬಾರಿ
ಸದ್ಯ ರಾಷ್ಟ್ರದಲ್ಲಿ ಸುಮಾರು 27ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್​ ದರ 100 ರೂಪಾಯಿ ಮೇಲಿದೆ. ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಪೆಟ್ರೋಲ್​-ಡೀಸೆಲ್​ ಬೆಲೆ ಬೇರೆಯದ್ದೇ ಆಗಿರುತ್ತದೆ. ಅದು ಆಯಾ ರಾಜ್ಯಗಳ ವ್ಯಾಟ್ (VAT) ಮೇಲೆ ಅವಲಂಬಿತವಾಗಿರುತ್ತದೆ. ಈ VAT ಆಧಾರದ ಮೇಲೆ ಹೇಳುವುದಾದರೆ ಸದ್ಯ ರಾಜಸ್ಥಾನಲ್ಲಿ ಅತ್ಯಂತ ಹೆಚ್ಚು ವ್ಯಾಟ್​ ಇದೆ. ಇಲ್ಲಿನ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 112 ರೂಪಾಯಿ ಇದ್ದು ಇದೇ ಹೈಯೆಸ್ಟ್ ಎನ್ನಿಸಿಕೊಂಡಿದೆ. ಇಲ್ಲಿ ಡೀಸೆಲ್​ ಬೆಲೆಯೇ 95. 26 ರೂ.ಇದೆ. ಇನ್ನು ನಮ್ಮ ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಅತ್ಯಂತ ಕಡಿಮೆ ಇರುವ ಪ್ರದೇಶವೆಂದರೆ ಅಂಡಮಾನ್​-ನಿಕೋಬಾರ್​ನ ರಾಜಧಾನಿ ಪೋರ್ಟ್​ಬ್ಲೇರ್​​. ಇಲ್ಲಿ ಪೆಟ್ರೋಲ್​ ಬೆಲೆ ಪ್ರತಿಲೀಟರ್​ಗೆ 82.96 ರೂ. ಮತ್ತು ಡೀಸೆಲ್​ ದರ 77.13 ರೂಪಾಯಿ ಇದೆ.
ಎಷ್ಟಿದೆ ಮಹಾನಗರಗಳಲ್ಲಿ ಇಂದು ಇಂಧನ ದರ?
ಭಾರತದ ಯಾವುದೇ ನಗರಗಳಲ್ಲಿ ಇಂದು ತೈಲಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100.58 ರೂ. ಮತ್ತು ಡೀಸೆಲ್ ಬೆಲೆ 85.01 ರೂ. ಇದ್ದರೆ, ಮೈಸೂರಿನಲ್ಲಿ ಪೆಟ್ರೋಲ್ ದರ 100.08 ರೂ., ಡೀಸೆಲ್ ದರ 84.56 ರೂ. ಆಗಿದೆ. ಹಾಗೆಯೇ ಮಂಗಳೂರಿನಲ್ಲಿ ಪೆಟ್ರೋಲ್ 99.76 ರೂ. ಮತ್ತು ಡೀಸೆಲ್ 84.24 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 86.67 ರೂ. ಇದ್ದರೆ, ಪೆಟ್ರೋಲ್ ದರ 95.41 ರೂ.ಆಗಿದೆ. ಮುಂಬೈ ಮಹಾನಗರಿಯಲ್ಲೂ ಸಹ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ಪೆಟ್ರೋಲ್ ದರ 109.98 ರೂ. ಮತ್ತು ಡೀಸೆಲ್ ದರ 94.14 ರೂ. ಆಗಿದೆ. ಹಾಗೆಯೇ, ಚೆನ್ನೈನಲ್ಲಿ ಪೆಟ್ರೋಲ್ ದರ 101.40 ರೂ. ಇದೆ. ಡೀಸೆಲ್ ದರ 91.43 ರೂ. ಆಗಿದೆ. ರಾಷ್ಟ್ರದ ಸುಮಾರು 27 ಮಹಾನಗರಗಳಲ್ಲಿ ಪೆಟ್ರೋಲ್ ದರ 100 ರೂ.ಗಡಿ ದಾಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಇಲಾಖೆಗೆ ವಕೀಲರ ನೇಮಕಾತಿ- ಅರ್ಜಿ ಸಲ್ಲಿಸಲು 14/12/2021 ಕೊನೆ ದಿನ