Publish Date: Tue, 20 Jan 2026 (19:17 IST)
Updated Date: Wed, 21 Jan 2026 (13:58 IST)
ಗದಗ: ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬಳಿಕ ಇದೀಗ ಆರಂಭಿಸಿರುವ ಉತ್ಖನನ ಕಾರ್ಯ ಐದನೇ ದಿನದಲ್ಲಿ ಮುಗಿದಿದ್ದು 2ನೇ ದಿನ ಗೋಚರವಾಗಿದ್ದ ಶಿವಲಿಂಗದ ಪಾಣಿಪೀಠವನ್ನು ಪುರಾತತ್ವ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಈ ಪಾಣಿಪೀಠ ಎರಡೂ ಭಾಗವಾಗಿ ಒಡೆದು ಹೋಗಿದೆ. ಶಿವಲಿಂಗ ಇರುವ ಮಧ್ಯದ ಭಾಗ ತುಂಡಾಗಿದ್ದು ಈಗ ಈ ಭಾಗದ ಶೋಧ ಕಾರ್ಯ ನಡೆಯುತ್ತಿದೆ. ಇನ್ನೂ ಸಿಕ್ಕಿರುವ ಶಿಲಾಕೃತಿಯು ಕೈಮುಗಿದು, ಪದ್ಮಾಸನದಲ್ಲಿ ಕುಳಿತ ರೀತಿಯಲ್ಲಿದೆ.
ಇಂದು ಮುಂಜಾನೆ ಪುರಾತನ ಕಾಲದ ಮಡಿಕೆ ಹಾಗೂ ಕವಡೆ ಪತ್ತೆಯಾಗಿತ್ತು. ಈಗ ಪುರಾತತ್ವ ಇಲಾಖೆ ಸಿಬ್ಬಂದಿ ಫೋಟೋಗ್ರಾಫಿ ಹಾಗೂ ಅದರ ಕುರುಹುಗಳ ದಾಖಲು ಮಾಡಿದ್ದಾರೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಸಿದ್ಧರ ಬಾವಿ ನಡುವೆ ನಡೆದಿರುವ ಉತ್ಖನನದ ವೇಳೆ ಈ ಪ್ರಾಚ್ಯಾವಶೇಷ ಸಿಕ್ಕಿದೆ. ಈ ಜಾಗದಲ್ಲಿ ದೇವಸ್ಥಾನದಿಂದ ಬಾವಿವರೆಗೆ ಮೆಟ್ಟಿಲುಗಳಿರುವ ಸಾಧ್ಯತೆ ಇದೆ. ಆರೇಳು ಅಡಿ ಕೆಳಕ್ಕೆ ಇಳಿದರೆ ಇನ್ನೂ ಹಲವಾರು ಪ್ರಾಚ್ಯಾವಶೇಷಗಳು ಸಿಗುವ ಸಾಧ್ಯತೆಯಿದೆ.