Publish Date: Sun, 23 Dec 2018 (15:04 IST)
Updated Date: Sun, 23 Dec 2018 (15:06 IST)
ಬಿಸಿಲುನಾಡು ಖ್ಯಾತಿಯ ಜಿಲ್ಲೆಯಲ್ಲಿ ನಡೆದ ಕ್ರಿಸಾಲಿಸ್ ಡೇ ಹಾಗೂ ವಸ್ತು ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಕಲಬುರಗಿ ನಗರದ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಕ್ರಿಸಾಲಿಸ್ ದಿನಾಚರಣೆ ಮತ್ತು
ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶಾಲೆಯ5ನೇ ತರಗತಿಯ 300 ಕ್ಕೂ ಹೆಚ್ಚುಮಕ್ಕಳು ತಮ್ಮ ವಿವಿಧ ಪ್ರಾತ್ಯಕ್ಷಿಕೆಗಳೊಂದಿಗೆ ಭಾಗಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಅನುರಾಧಾ ಪಾಟೀಲ ಭಾಗವಹಿಸಿ ಮಾತನಾಡಿ, ಕ್ರಿಸಾಲಿಸ್ ಶಿಕ್ಷಣ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‍ಬಿಆರ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರ ಮಾರ್ಗದರ್ಶನದಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗು ಶಿಕ್ಷಕ ವೃಂದದವರು ಭಾಗವಹಿಸಿ ಶಾಲೆಯ ಮೆರುಗನ್ನು ಹೆಚ್ಚಿಸಿದರು.