Publish Date: Sat, 22 Dec 2018 (15:41 IST)
Updated Date: Sat, 22 Dec 2018 (15:43 IST)
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಆದರೆ ಜೆಡಿಎಸ್ ತನ್ನ ಪಾಲಿನ ಸಚಿವ ಸ್ಥಾನಗಳನ್ನು ಯಾರಿಗೆ ನೀಡುತ್ತದೆ ಎಂಬ ಕುತೂಹಲವನ್ನು ಸೀಕ್ರೇಟ್ ಆಗಿ ಇಟ್ಟುಕೊಂಡಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದ್ದರೂ ಜೆಡಿಎಸ್ ಕೋಟಾದಡಿ ಸಚಿವರಾಗುವ ಇಬ್ಬರ ಹೆಸರಿನ ಗುಟ್ಟನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಟ್ಟುಕೊಟ್ಟಿಲ್ಲ.
ರಾಜ್ಯಪಾಲ ವಜುಭಾಯಿವಾಲ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಮಯಾವಕಾಶ ಕೋರಿ ರಾಜಕೀಯ ಬೆಳವಣಿಗೆಗಳ ಮಾಹಿತಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಸಂಪುಟ ವಿಸ್ತರಣೆಗೆ ಸಂಜೆ 5.20 ಸಮಯ ನಿಗದಿಪಡಿಸಲಾಗಿದ್ದು ಜೆಡಿಎಸ್ನಿಂದ ಯಾರು ಸಚಿವರಾಗಲಿದ್ದಾರೆ ಎನ್ನುವುದನ್ನು ಕಾದು ನೋಡಿ ಎಂದು ಹೇಳಿದರು.