Publish Date: Wed, 12 Sep 2018 (16:21 IST)
Updated Date: Wed, 12 Sep 2018 (16:24 IST)
ಆ ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಸುರಂಗವೊಂದು ಪತ್ತೆಯಾಗಿದೆ. ಗ್ರಾಮದ ಪ್ರಮುಖ ರಸ್ತೆ ಹಾಗೂ ಮುಖ್ಯ ರಸ್ತೆಯಲ್ಲಿಯೇ ಸುರಂಗ ಪತ್ತೆಯಾಗಿದೆ. ಹೀಗಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮಂಡ್ಯದಲ್ಲಿ ವಿಚಿತ್ರ ಸುರಂಗ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದಲ್ಲಿ ಪತ್ತೆಯಾದ ಸುರಂಗ ಇದಾಗಿದೆ. ಕಳೆದ ಮೂರು ದಿನಗಳ ಹಿಂದೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿರುವ ಸುರಂಗ ಮಾರ್ಗವು,
ಮುಟ್ಡನಹಳ್ಳಿ ಗ್ರಾಮದ ರಸ್ತೆ ಮಧ್ಯದಲ್ಲೇ ಪತ್ತೆಯಾಗಿದೆ. ಸುರಂಗ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸುಮಾರು ಹತ್ತರಿಂದ ಹದುನೈದು ಅಡಿ ಇರುವ ಸುರಂಗವು ಕಳೆದ ಮೂರು ದಿನಗಳ ಹಿಂದೆ ಮಳೆ ಬಂದ ಪರಿಣಾಮ ಕುಸಿದಿರುವ ಭೂಮಿಯಿಂದ ರಸ್ತೆ ನಡುವೆ ಕಾಣಿಸಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿದರೂ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿಲ್ಲ. ಮಕ್ಕಳು, ಪ್ರಾಣಿಗಳು ಸುರಂಗದ ಒಳಗೆ ಬೀಳಬಹುದೆಂಬ ಆತಂಕದಲ್ಲಿ ಗ್ರಾಮಸ್ಥರು ಮಣ್ಣು ಮುಚ್ಚಿದ್ದಾರೆ. ಮಣ್ಣು ಮುಚ್ಚಿದರೂ ಇನ್ನು ಆರು ಅಡಿ ಆಳ ಇರುವ ಸುರಂಗ ಆತಂಕಕ್ಕೆ ಕಾರಣವಾಗಿದೆ. ಸುರಂಗದ ಸುತ್ತ ಕಲ್ಲು ಚಪ್ಪಡಿ ಮುಚ್ಚಲಾಗಿದೆ.
Jagadeesh
Publish Date: Wed, 12 Sep 2018 (16:21 IST)
Updated Date: Wed, 12 Sep 2018 (16:24 IST)