ಹಾವೇರಿ : ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬ ದೂರು ನೀಡಲು ಬಂದ ಮಹಿಳೆಗೆ ನ್ಯಾಯ ಕೊಡಿಸುವ ಬದಲು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಧರ್ಮದೇಟು ತಿಂದ ಘಟನೆ ಬ್ಯಾಡಗಿ ತಾಲೂಕಿನ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದಿದೆ.
ಬ್ಯಾಡಗಿ ಪೊಲೀಸ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಎಸ್ ಐ ಪಿ ಚಿದಾನಂದ್ ಮಹಿಳೆಯ ಜೊತೆ ಅನುಚಿತ ವರ್ತನೆ ತೋರಿದ ಪೊಲೀಸ್ ಇನ್ಸ್ಪೆಕ್ಟರ್. ತಾಲೂಕಿನ ನೆಲ್ಲಿಕೊಪ್ಪ ಗ್ರಾಮದ ನೀಲಮ್ಮ ಎನ್ನೋ ಮಹಿಳೆಯೊಬ್ಬಳು ತಮ್ಮ ಸಹೋದರ ತನ್ನ ಮೇಲೆ ಹಲ್ಲೆ ಮಾಡುತ್ತಾನೆ ಎಂದು ದೂರು ನೀಡಲು ಹೋಗಿದ್ದಳು. ಆಗ ದೂರು ದಾಖಲಿಸಿಕೊಂಡು ಮಹಿಳೆಯ ರಕ್ಷಣೆ ನೀಡುವ ಬದಲು ‘ನಿನಗೆ ಆಗಿರುವ ಗಾಯ ತೋರಿಸು ಅಂತ ಬಟ್ಟೆ ಬಿಚ್ಚಿಸಲು ಯತ್ನಿಸಿ, ನೀನು ಸುಂದರವಾಗಿದ್ದಿಯ ನನ್ನ ಜೊತೆ ದೇಹ ಹಂಚಿಕೊ ಎಂದು ಅಸಭ್ಯವಾಗಿ ವರ್ತಿಸಿದ್ದಾನೆ.
ಅಲ್ಲಿಂದ ಓಡಿಬಂದ ನೀಲಮ್ಮ ತಮ್ಮ ಕುಟುಂಬ,ಹಾಗೂ ಸಮಾಜದ ಮುಖಂಡರಿಗೆ ಈ ವಿಚಾರ ತಿಳಿಸಿ ಇನ್ಸ್ಪೆಕ್ಟರ್ ವರ್ತನೆ ಖಂಡಿಸಿ ಠಾಣೆ ಎದುರುಗಡೆ 100 ಜನರನ್ನು ಸೇರಿಸಿ ಧರಣಿ ಮಾಡಿದ್ದಾಳೆ. ಆಗ ಅಲ್ಲಿಗೆ ಬಂದು ದರ್ಪ ತೋರಿದ ಸಿಪಿಐ ಪಿ ಚಿದಾನಂದ್ ನನ್ನು ಜೀಪಿನಿಂದ ಹೊರಗೆಳೆದು ಮಹಿಳೆಯರು ಹಿಗ್ಗಾ ಮುಗ್ಗ ಥಳಿಸಿದ್ದಾರೆ. ಈತನನ್ನು ತಕ್ಷಣ ಸೇವೆಯಿಂದ ಅಮಾನತ್ತು ಗೊಳಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.