Publish Date: Sat, 12 Oct 2019 (14:58 IST)
Updated Date: Sat, 12 Oct 2019 (15:01 IST)
ಪೈಪ್ ನಿಂದ ಲೀಕ್ ಆಗುತ್ತಿದ್ದ ನೀರನ್ನು ನಿಲ್ಲಿಸಲು ಕೋತಿಯೊಂದು ಮಾಡುತ್ತಿರುವ ಸಾಹಸವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು. ಅಷ್ಟಕ್ಕೂ ಕೋತಿ ಮಾಡಿದ್ದೇನು ಗೊತ್ತಾ? ಪೈಪ್ ನಿಂದ ನೀರು ಲೀಕ್ ಆಗುತ್ತಿರುವುದನ್ನು ಕಂಡ ಕೋತಿ ಅಲ್ಲಿ ಬಿದ್ದಿದ್ದ ಒಣ ಎಲೆಗಳಿಂದ ನೀರನ್ನು ನಿಲ್ಲಿಸಲು ಪ್ರಯತ್ನಿಸುತ್ತಿತ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲದೆ ಕೋತಿಯ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುದ್ದಿ ಇಲ್ಲದ ಪ್ರಾಣಿಗಳೇ ನೀರಿನ ಮಹತ್ವ ಅರಿತು ಅದನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ, ಎಲ್ಲಾ ತಿಳಿದಿರುವ ಬುದ್ದಿವಂತ ಮನುಷ್ಯರು ಮಾತ್ರ ನೀರಿನ್ನು ಉಳಿಸಲು ಯಾಕೆ ಪ್ರಯತ್ನಿಸುತ್ತಿಲ್ಲ ಎಂಬುದೇ ಬೇಸರದ ಸಂಗತಿ.
pavithra
Publish Date: Sat, 12 Oct 2019 (14:58 IST)
Updated Date: Sat, 12 Oct 2019 (15:01 IST)