Select Your Language

Notifications

webdunia
webdunia
webdunia
webdunia

ಹೆಣ್ಣು ಹುಟ್ಟಿತು ಎಂದು ಆಕೆ ಮಾಡಿದ್ದೇನು ಗೊತ್ತಾ?

ಹೆಣ್ಣು ಹುಟ್ಟಿತು ಎಂದು ಆಕೆ ಮಾಡಿದ್ದೇನು ಗೊತ್ತಾ?
ಯಾದಗಿರಿ , ಬುಧವಾರ, 12 ಡಿಸೆಂಬರ್ 2018 (16:10 IST)
ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಮೂರು ತಿಂಗಳ ಹೆಣ್ಣು ಮಗುವನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಯಾದಗಿರಿ ರೈಲ್ವೆ ನಿಲ್ದಾಣದ ರೈಲ್ವೆ ಸೇತುವೆ ಕೆಳಭಾಗದಲ್ಲಿ ನಸುಕಿನ ಜಾವ ಹೆಣ್ಣು ಮಗು ಪತ್ತೆಯಾಗಿದೆ. ಮಗು ಹೆತ್ತಮ್ಮಳ ಮಡಿಲಲ್ಲಿ ಸೇರಲು ಹಂಬಲಿಸಿ ರೋಧಿಸುತ್ತಿತ್ತು.

ಮಗುವಿನ ಅಕ್ರಂದನ ಕೇಳಿದ ರೈಲ್ವೆ ಸುರಕ್ಷ ಬಲದ ಪೊಲೀಸ್ ಅಧಿಕಾರಿಗಳು ಕೂಡಲೇ ಮಗುವನ್ನು  ರಕ್ಷಣೆ ಮಾಡಿದ್ದಾರೆ. ನಂತರ‌ ಮಗುವನ್ನು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರ ಮಾಡಿದ್ದಾರೆ. ಹೆತ್ತಮ್ಮಳ ಮಡಿಲಲ್ಲಿ ಇರಬೇಕಾದ ಹೆಣ್ಣು ಮಗು ಯಾಕೆ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ. ಹೇಗೆ ಮಗು ಬಿಟ್ಟು ಪೋಷಕರು ಅನಾಥ ಮಾಡಿದ್ದಾರೆ.

ಈ ಬಗ್ಗೆ ರೈಲ್ವೆ ಪೊಲೀಸ್ ಅಧಿಕಾರಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಿ ಸ್ಥಾನ ನೀಡುವಂತೆ ಎಂ.ಬಿ.ಪಾಟೀಲ್ ಪರ ಸ್ವಾಮೀಜಿಗಳ ಬ್ಯಾಟಿಂಗ್