Select Your Language

Notifications

webdunia
webdunia
webdunia
webdunia

ತೆರಿಗೆ ಕಳ್ಳರಿಗೆ ಮಹಿಳಾ ಡಿಸಿ ಬಿಸಿ ಮುಟ್ಟಿಸಿದ್ದು ಹೇಗೆ ಗೊತ್ತಾ?

ತೆರಿಗೆ ಕಳ್ಳರಿಗೆ ಮಹಿಳಾ ಡಿಸಿ ಬಿಸಿ ಮುಟ್ಟಿಸಿದ್ದು ಹೇಗೆ ಗೊತ್ತಾ?
ಹಾಸನ , ಸೋಮವಾರ, 23 ಜುಲೈ 2018 (16:25 IST)
ಒಂದೊಮ್ಮೆ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ ಮೆಟ್ಟಿಲೇರಿ ಸುದ್ದಿಯಾಗಿದ್ದ ಮಹಿಳಾ ಡಿಸಿ, ಈಗ ಖಡಕ್ ಕಾರ್ಯವೈಖರಿಯಿಂದ ಮತ್ತೆ ಸುದ್ದಿಗೆ ಬಂದಿದ್ದಾರೆ. ಪರವಾನಿಗೆ ಪಡೆಯದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದವರ ಮೇಲೆ ಖಡಕ್ ಕ್ರಮಕ್ಕೆ ಎಚ್ಚರಿಕೆ ನೀಡಿದ್ದಾರೆ.

ತೆರಿಗೆ ಕಳ್ಳರಿಗೆ ಹಾಸನ ಜಿಲ್ಲಾಧಿಕಾರಿ ಬಿಸಿ ಮುಟ್ಟಿಸುತ್ತಿದ್ದಾರೆ. ಪರವಾನಿಗೆ ಪಡೆಯದೇ ನಿರ್ಮಿಸುತ್ತಿದ್ದ ಕಟ್ಟಡ ತೆರವಿಗೆ ಸೂಚನೆ ನೀಡಿದ್ದಾರೆ. ಹಾಸನ ನಗರದ ಬಿ.ಎಂ. ರಸ್ತೆಯಲ್ಲಿ ಕಾಮಗಾರಿ ಹಂತದಲ್ಲಿರುವ ಬೃಹತ್ ಕಟ್ಟಡ ಇದಾಗಿದೆ. ಲೀಲಾಕುಮಾರ್ ಎಂಬುವವರಿಗೆ ಸೇರಿದ 915.93 ಚದರ ಅಡಿಯ ಬೃಹತ್ ಕಟ್ಟಡವು ಪರವಾನಿಗೆ ಪಡೆದಿರಲಿಲ್ಲ. ಕಟ್ಟಡ ಕಟ್ಟಲು ಸಹಕರಿಸಿದ ನಗರಸಭೆ ಅಧಿಕಾರಿಗಳಿಗೂ ಅಮಾನತು ಎಚ್ಚರಿಕೆ ನೀಡಿರುವ ಡಿಸಿ ಗಮನ ಸೆಳೆದಿದ್ದಾರೆ.

ನಿಯಮ ಬಾಹಿರ ಕಟ್ಟಡದಿಂದ ಸಾರ್ವಜನಿಕರಿಗೆ ತೊಂದರೆಯಾದ ಹಿನ್ನಲೆ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ. ತ್ವರಿತಗತಿಯಲ್ಲಿ ಡೆಮಾಲಿಶ್ ಮಾಡುವಂತೆ ಹಾಸನ ನಗರಸಭೆ ಅಧಿಕಾರಿಗಳಿಗೆ ಸೂಚನೆಯನ್ನು ಡಿಸಿ ರೋಹಿಣಿ ಸಿಂಧೂರಿ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಗೆ ತಿರುಗೇಟು