Select Your Language

Notifications

webdunia
webdunia
webdunia
webdunia

ಜ್ವಾಲಾಮುಖಿ ಅಂದ್ರೆ ಏನು ಗೊತ್ತಾ..? ಎಲ್ಲಿಂದ ಸ್ಫೋಟವಾಗುತ್ತೆ..?

ಜ್ವಾಲಾಮುಖಿ ಅಂದ್ರೆ ಏನು ಗೊತ್ತಾ..? ಎಲ್ಲಿಂದ ಸ್ಫೋಟವಾಗುತ್ತೆ..?
bangalore , ಸೋಮವಾರ, 13 ನವೆಂಬರ್ 2023 (18:14 IST)
ಜ್ವಾಲಾಮುಖಿ ಅಂದರೆ ಉರಿ ಬೆಟ್ಟ, ಕೆಂಡದ ಜ್ವಾಲೆ..ಭೂಮಿಯ ಕೆಳ ಪದರದಲ್ಲೆಲ್ಲೋ ಹರಿಯುತ್ತಲೇ ಇರುತ್ತದೆ. ನದಿಯಂತೆ ,ಪ್ರವಾಹದಂತೆ ಭೂಮಿಯಡಿಯಿರುವ ಈ ಲಾವಾರಸ ಒಮ್ಮೊಮ್ಮೆ ಮೇಲ್ಪದರಕ್ಕೆ ಬಂದು ಉಕ್ಕ ತೊಡಗುತ್ತದೆ. ಆಗ ಭೂಮಿಯ ಮೇಲಿದ್ದ ಸಕಲ ಜೀವರಾಶಿಗಳಿಗೂ ಆಪತ್ತು. ಭೂಗರ್ಭದಿಂದ ಕುದಿಯುವ ದ್ರವ,ಬೂದಿ,ಹೊಗೆ, ಕಲ್ಲು ,ಮಣ್ಣುಗಳೆಲ್ಲ ಒಮ್ಮೆಲೆ ಬಾನೆತ್ತರಕ್ಕೆ ಚಿಮ್ಮತೊಡಗಿದರೆ ಅಲ್ಲಿ ಜ್ವಾಲಾಮುಖಿ ತನ್ನ ಅಟ್ಟಹಾಸ ತೋರಲು ಶುರು ಮಾಡಿ ಬಿಡುತ್ತದೆ.
 
ಇನ್ನೂ ನದಿ ಅಂತಿಲ್ಲ, ಪರ್ವತ ಅಂತಿಲ್ಲ, ಸಾಗರ ಅಂತಿಲ್ಲ, ಸರೋವರ ಅಂತಿಲ್ಲ. ಎಲ್ಲಿ ಬೇಕಾದರೂ ಜ್ವಾಲಾಮುಖಿ ಸ್ಫೋಟಗೊಳ್ಳಬಹುದು. ಇದಕ್ಕೆ ಇಲ್ಲೇ ಸ್ಫೋಟವಾಗಬೇಕು ಅಂತೇನು ನಿಯಮಗಳಿಲ್ಲ. ಎಲ್ಲವೂ ಪ್ರಕೃತಿಯ ಆಟ. ಇದ್ದಕ್ಕಿದ್ದಂತೆ ಸಮುದ್ರಾಳದಿಂದ ಬೆಂಕಿಯುAಡೆ ಉಗುಳಲು ಶುರುವಾಗಿ ಬಿಡುತ್ತದೆ. ಒಮ್ಮೊಮ್ಮೆ ಆಳದ ಸರೋವರದಿಂದಲೂ ಮೇಲಕ್ಕೆ ಬಂದು ಬಿಡುತ್ತದೆ. ಒಮ್ಮೊಮ್ಮೆ ಹರಿಯುವ ನದಿ ನೀರಿನ ಮೇಲೂ ಲಾವಾರಸ ಹರಿದು ಹಾಗೆಯೇ ಬೆಂಕಿಯ ಮೆರವಣಿಗೆ ಶುರುವಾಗಿ ಬಿಡುತ್ತದೆ. ವಿಶ್ವದಲ್ಲಿ ನಾನಾ ರೀತಿಯ ಜ್ವಾಲಾಮುಖಿಗಳು ಇದ್ದಾವೆ. ಇವುಗಳಲ್ಲಿ ಶಾಶ್ವತ ಜ್ವಾಲಾಮುಖಿಗಳು ಅನೇಕ ದ್ವೀಪ ರಾಷ್ಟ್ರಗಳಲ್ಲಿದ್ದಾವೆ. ಇವು ಆಗಾಗ ಜೀವ ಪಡೆದುಕೊಂಡು ತಮ್ಮ ಅಟ್ಟಹಾಸ ತೋರಿಸುತ್ತಿರುತ್ತಾವೆ. 
 
ಮೊದಲು ದಟ್ಟ ಹೊಗೆ. ಬಳಿಕ ಶುರುವಾಗೋದು ಲಾವಾರಸದ ಹೊಳೆ. ಇದು ನೋಡೋದಕ್ಕೆ ಬಾಣ ಬಿರುಸು ಸಿಡಿತದಂತೆ ಕಾಣತೊಡಗುತ್ತೆ. ಇದೇನಪ್ಪಾ ದೂರದಲ್ಲೆಲ್ಲೋ ಉತ್ಸವ ನಡೆಯುತ್ತಿರಬೇಕೆಂದು ಯೋಚಿಸುತ್ತಿದ್ದರೆ ಅಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿರುತ್ತದೆ. ಮುಂದೆ ತಿಂಗಳುಗಟ್ಟಲೇ ಶಮನವಾಗೋದೇ ಇಲ್ಲ. ಜಪಾನ್‌ನಲ್ಲಿ ,ಇಂಡೋನೇಷ್ಯಾದಲ್ಲಿ ಆಗಾಗ ಇಂತಹ ಜ್ವಾಲಮುಖಿಗಳು ಕಾಣಿಸಿಕೊಂಡು ಆತಂಕ ಹುಟ್ಟಿಸುತ್ತಲೇ ಇರುತ್ತವೆ.
 
ಈ ಜ್ವಾಲಾಮುಖಿಗಳ ರಣ ಆರ್ಭಟ ಹೆಚ್ಚಾಗಿ ಕಾಣಿಸೋದು ಈ ದ್ವೀಪ ಪ್ರದೇಶಗಳಲ್ಲೇ, ಆದರೂ ಕೂಡ ಈ ಪ್ರದೇಶದ ಕಡೆಗೆ ಪ್ರವಾಸಿಗರು ಹೋಗೋದನ್ನ ಕಡಿಮೆ ಮಾಡಿಲ್ಲ, ಆತಂಕ, ಭಯ ಇದ್ದರೂ ಕೂಡ, ಇಂತಹ ಜ್ವಾಲಾಮುಖಿಗಳ ಹಾಟ್ ಸ್ಪಾಟ್‌ಗಳಿಗೆ ಎಂಟ್ರಿ ಕೊಡ್ತಾನೇ ಇರ್ತಾರಾ..? ಬಟ್ ಗ್ರಹಚಾರ ಸರಿ ಇದ್ದರೇ, ಓಕೆ, ಎಡವಟ್ಟಾಯ್ತೋ, ಆ ದೇವರು ಬಂದರೂ, ತಪ್ಪಿಸಿಕೊಳ್ಳೋದಕ್ಕೆ ಆಗಲ್ಲ..!??
 
ಜ್ವಾಲಾಮುಖಿ ಹಿಮಾಚ್ಛಾಧಿತ ಪ್ರದೇಶಗಳಲ್ಲೂ ಸ್ಫೋಟಿಸುತ್ತವೆ. ಒಂದು ಕಡೆ ಹಿಮಗಡ್ಡೆಗಳು ಇರುವಾಗಲೇ ಇಲ್ಲೊಂದು ಸ್ಫೋಟ ಸಂಭವಿಸಿ ಬಿಡುತ್ತವೆ. ನಿರಂತರವಾಗಿ ಚಳಿಯಿಂದ ,ಮಳೆಯಿಂದ, ಹಿಮಗಡ್ಡೆಗಳಿಂದ ಆವೃತವಾಗಿರುವ ಪ್ರದೇಶಗಳಲ್ಲೂ ಜ್ವಾಲಾಮುಖಿ ಸ್ಫೋಟಿಸುತ್ತವೆ. ಹಿಮ ಇದೆ ಅಂತ ಇದೇನು ತಣ್ಣಗಾಗುವುದಿಲ್ಲ. ಭೂಮಿಯ ಮೇಲೆ ಉಕ್ಕಿ ತನ್ನ ಪ್ರತಾಪ ತೋರಿಸುತ್ತದೆ. ಪುಣ್ಯ ಭಾರತದಲ್ಲಿ ಇಂತಹ ಜ್ವಾಲಾಮುಖಿಗಳು ಸ್ಫೋಟಿಸುವುದಿಲ್ಲ. ಇಂತಹ ಪ್ರದೇಶಗಳು ಹತ್ತಿರದಲ್ಲೆಲ್ಲೂ ಇಲ್ಲ. ನೆರೆಯ ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟಿಸುತ್ತವೆಯೇ ವಿನಹ ಜ್ವಾಲಾಮುಖಿಗಳಿಲ್ಲ. ಅಷ್ಟರ ಮಟ್ಟಿಗೆ ಏಷ್ಯಾ ಇದರಿಂದ ಸೇಫ್. 
 
ಜ್ವಾಲಾಮುಖಿ ಎಷ್ಟೊಂದು ಭಯಾನಕವಾಗಿರುತ್ತದೆ ಅಂತಾ ನಿಮಗೆ ಗೊತ್ತಾಗಿರುತ್ತೆ. ಯಾವ ದೇಶ ಎಷ್ಟೇ ಮುಂದುವರೆದಿರಲಿ, ಸೂಪರ್ ಪವರ್ ಅನಿಸಿಕೊಳ್ಳಲಿ,..ಮನುಷ್ಯ ಅದೆಷ್ಟೇ ಸಂಶೋಧನೆ ನಡೆಸಲಿ, ಇಂತಹ ಪ್ರಾಕೃತಿಕ ವಿಕೋಪವನ್ನು ತಡೆಗಟ್ಟಲೂ ಆಗೋದೇ ಇಲ್ಲ. ಅದಕ್ಕೆ ಪರಿಹಾರ ಒಂದೇ. ಆದಷ್ಟು ಪ್ರಕೃತಿ,ಪರಿಸರವನ್ನು ಉಳಿಸೋದು,...ಇಲ್ಲವಾದರೆ ನಾವು ನಿಂತ ನೆಲವೇ ಮುಂದೊಮ್ಮೆ ಅಗ್ನಿಕುಂಡವಾಗಬಹುದು. ನಿಂತ ನೆಲವೇ ಕುಸಿಯಬಹುದು ಎಚ್ಚರ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಅನೈತಿಕ ಸಂಬಂಧ: ಪತಿ ಏನ್ ಮಾಡ್ದ ಗೊತ್ತಾ?