Select Your Language

Notifications

webdunia
webdunia
webdunia
webdunia

ತಡರಾತ್ರಿಯವರೆಗೂ ಕಾದು ಕುಳಿತು ಅಕ್ರಮ ಮರಳು ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಆ ಶಾಸಕರ್ಯಾರು ಗೊತ್ತಾ?

ತಡರಾತ್ರಿಯವರೆಗೂ ಕಾದು ಕುಳಿತು ಅಕ್ರಮ ಮರಳು ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಆ ಶಾಸಕರ್ಯಾರು ಗೊತ್ತಾ?
ವಿಜಯಪುರ , ಮಂಗಳವಾರ, 15 ಜನವರಿ 2019 (10:34 IST)
ವಿಜಯಪುರ : ಶಾಸಕ ದೇವಾನಂದ ಚವ್ಹಾಣ ಅವರು ತಡರಾತ್ರಿಯವರೆಗೂ ಕಾದು ಕುಳಿತು ಜಿಲ್ಲೆಯಲ್ಲಿ ಅಕ್ರಮ ಮರಳು ತುಂಬಿಕೊಂಡು ಹೋಗುತ್ತಿದ್ದ ವಾಹನಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಪೊಲೀಸ್ ಇಲಾಖೆ ಹಾಗೂ  ಕಂದಾಯ ಇಲಾಖೆಯ ಭಯವಿಲ್ಲದೆ  ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಮಾಹಿತಿ ಪಡೆದ ಶಾಸಕ ದೇವಾನಂದ ಚವ್ಹಾಣ ಅವರು ಈ ಮಾಫಿಯಾಕ್ಕೆ ಬ್ರೇಕ್ ಹಾಕಲು ಸೋಮವಾರ ತಡರಾತ್ರಿ ನಾಗಠಾಣ ಮತಕ್ಷೇತ್ರದಲ್ಲಿ ಕಾದು ಕುಳಿತು ಮರಳು ತುಂಬಿಕೊಂಡು ಹೋಗುತ್ತಿದ್ದ ವಾಹನಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಈ ಘಟನೆಯಲ್ಲಿ ಚಾಲಕ ಪರಾರಿಯಾಗಿದ್ದು, ಸದ್ಯ ವಿಜಯಪುರ ಗ್ರಾಮೀಣ ಪೊಲೀಸರು ಮರಳು ವಾಹನ ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ. ಶಾಸಕರ ಈ ಕಾರ್ಯಕ್ಕೆ  ಸಾರ್ವಜನಿಕರಿಂದ ಬಾರೀ  ಮೆಚ್ಚುಗೆ ವ್ಯಕ್ತವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಹಿಂದೆ ಸರಿದ ಎಂ.ಬಿ.ಪಾಟೀಲ್