Select Your Language

Notifications

webdunia
webdunia
webdunia
Saturday, 12 April 2025
webdunia

ಸಿದ್ದಗಂಗಾ ಶ್ರೀಗಳದ್ದು ಜನಮುಖಿ ಕಾಯಕ ಎಂದವರಾರು ಗೊತ್ತಾ?

ಮುರಘಾ ಶ್ರೀ
ದಾವಣಗೆರೆ , ಶುಕ್ರವಾರ, 18 ಜನವರಿ 2019 (19:38 IST)
ಹಲವು ಜನರ, ಭಕ್ತರ ಅಪೇಕ್ಷೆಯಂತೆ ಜನಮುಖಿ ಕಾಯಕ‌ವನ್ನು ನಡೆಸುತ್ತಾ ಸಿದ್ದಗಂಗಾ ಶ್ರೀ ಬಂದಿದ್ದಾರೆ ಎಂದು ಚಿತ್ರದುರ್ಗ ಮುರಘಾಮಠದ ಶ್ರೀ ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ದಾವಣಗೆರೆಯಲ್ಲಿ ಚಿತ್ರದುರ್ಗ ಮುರಘಾಮಠದ ಡಾ. ಶಿವಮೂರ್ತಿ ಮುರಘಾ  ಶರಣರು ಒತ್ತಾಯ ಪಡಿಸಿದರು.

ಸಿದ್ದಗಂಗಾ ಶ್ರೀ ಗಳ ಸೇವೆ ಪ್ರಶಸ್ತಿಗಿಂತ ಹೆಚ್ಚಿನದ್ದು. ಮಠದ ಪರಂಪರೆಗೆ ಪ್ರಾಚೀನತೆ ಇದೆ. ಜನಮುಖಿ ಕೆಲಸ ಮಾಡುವವರು ಜನರಿಗೆ ಹತ್ತಿರವಾಗುತ್ತಾರೆ. ಅದೇ ರೀತಿ ತ್ರಿವಿಧ ದಾಸೋಹಿಗಳು. ಲಕ್ಷಾಂತರ ಮಕ್ಕಳಿಗೆ ಅಕ್ಷರ ಹಾಗೂ ಅರವಿನ ದೀಕ್ಷೆ ಕೊಟ್ಟವರು ಸಿದ್ದಗಂಗಾ ಶ್ರೀಗಳು. ಶ್ರೀಗಳ ವ್ಯಕ್ತಿತ್ವ ಬಹಳ ಎತ್ತರವಾದದ್ದು, ಇಂತಹ ಚೇತನಕ್ಕೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ತಿಳಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಜಿಪಂ ಅಧ್ಯಕ್ಷರ ರಾಜೀನಾಮೆಗೆ ಪ್ರತಿಪಕ್ಷ ಒತ್ತಾಯ