Publish Date: Sat, 06 Oct 2018 (16:45 IST)
Updated Date: Sat, 06 Oct 2018 (16:47 IST)
ಬಸ್ ಪಲ್ಟಿಯಾದ ಪರಿಣಾಮ 25 ಕ್ಕೂ ಹೆಚ್ಚು ಜನರು ಗಾಯಗೊಂಡು, ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ತಮಿಳುನಾಡಿನ ದಿಂಬಮ್ ಬಳಿ ಬಸ್ ಪಲ್ಟಿಯಾಗಿದೆ.
ಮೈಸೂರಿನಿಂದ ಈರೋಡಿಗೆ ತೆರಳುತ್ತಿದ್ದ ಆರ್.ಪಿ.ಎನ್. ಬಸ್ಸು ಇದಾಗಿದೆ. 26 ನೇ ತಿರುವಿನಲ್ಲಿ ಪ್ರಪಾತಕ್ಕೆ ಬಸ್ ಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ 26 ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಓರ್ವ ಸಾವನ್ನಪ್ಪಿದ್ದಾನೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಸಂಜೆ 6.20 ಕ್ಕೆ ಚಾಮರಾಜನಗರ ಮಾರ್ಗವಾಗಿ ಈರೋಡ್ ತೆರಳಿದ ಆರ್.ಪಿ.ಎನ್ ಬಸ್ಸು ಪ್ರಪಾತಕ್ಕೆ ಬಿದ್ದಿದೆ. ಈ ಕುರಿತು ಸತ್ಯಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.