Select Your Language

Notifications

webdunia
webdunia
webdunia
webdunia

ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…?

ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…?
ಬೆಂಗಳೂರು , ಶುಕ್ರವಾರ, 3 ನವೆಂಬರ್ 2017 (09:42 IST)
ಬೆಂಗಳೂರು:  ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಬಿಎಸ್ ವೈ ಯಾತ್ರೆ ಆರಂಭಿಸಿದ್ದು, ಕುಣಿಗಲ್ ನಲ್ಲಿ ರಥ ಸಂಚಾರ ಮುಗಿಸಿದೆ. ಆದರೆ ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಬಳಸುತ್ತಿರುವ ರಥವನ್ನು ಬರೋಬ್ಬರಿ 90 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಿಎಸ್ ವೈ ಆಸ್ತಿಕರೇ. ಹೀಗಾಗಿ ಅವರು ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಅವರು ನಿತ್ಯ ಸಂಚರಿಸೋದು 4545 ಇರುವ ಕಾರಿನಲ್ಲಿ. ಹೀಗಾಗಿ ಈ ರಥಕ್ಕೂ ಕೂಡ ಅದೇ ಸಂಖ್ಯೆಯಲ್ಲಿ ರಿಜಿಸ್ಟರ್ ಮಾಡಲಾಗಿದೆ.

ವಿಶೇಷವಾಗಿ ಇವರಿಗಾಗಿಯೇ ಈ ವಾಹನ ಡಿಸೈನ್ ಮಾಡಲಾಗಿದೆ. ಇದರಲ್ಲಿ 2 ವಿಐಪಿ ಚೇರ್ ಗಳಿವೆ. ವಿಶ್ರಾಂತಿ ತೆಗೆದುಕೊಳ್ಳಲು ಒಂದು ಉದ್ದದ ಸೋಫಾ ಇದೆ. ಇಲ್ಲಿ ಬೇಕಾದಲ್ಲಿ ಸಣ್ಣ ಮೀಟಿಂಗ್ ಸಹ ನಡೆಸಬಹುದಾಗಿದೆ.

ಒಳಗಡೆ ಸಂಪೂರ್ಣ ಎಸಿ ವ್ಯವಸ್ಥೆಯಿದೆ. ಒಳಗೆ ಅಡುಗೆ ಮಾಡಿಕೊಳ್ಳಲು ಇಂಡಕ್ಷನ್ ಸ್ಟೌವ್ ಇದ್ದು, ಮೈಕ್ರೊವೇವ್ ಓವೆನ್ ವ್ಯವಸ್ಥೆಯೂ ಇದೆ. ಪಕ್ಕದಲ್ಲಿ ಸಣ್ಣ ಟಾಯ್ಲೆಟ್ ಕೂಡ ಇದೆ. ಇನ್ನು ಸ್ಯಾಟಲೈಟ್ ಮೂಲಕ ದಿನದ ನ್ಯೂಸ್ ಅಪ್ ಡೇಟ್ ವೀಕ್ಷಿಸಲು ಎಲ್ಇಡಿ ಟಿವಿ ಸಹ ಇದೆ. ಇದು ರಥದ ಒಳಗಿರುವ ವ್ಯವಸ್ಥೆಗಳು.

ಇನ್ನು ಹೊರಗೆ ಬಂದ್ರೆ ಹೋದಕಡೆಯೆಲ್ಲ ಪ್ರತ್ಯೇಕ ವೇದಿಕೆ ನಿರ್ಮಿಸುವ ಬದಲು ರಥದಲ್ಲಿಯೇ ವೇದಿಕೆಯ ವ್ಯವಸ್ಥೆ ಇದೆ. ಇಲ್ಲಿ ಒಟ್ಟಿಗೆ ಸುಮಾರು 20 ಜನ ಏಕಕಾಲದಲ್ಲಿ ನಿಂತುಕೊಳ್ಳಬಹುದಾಗಿದೆ. ಮೈಕ್ ಸೆಟ್ ವ್ಯವಸ್ಥೆ ಕೂಡ ಇದರಲ್ಲಿಯೇ ಇದೆ.

224 ವಿಧಾನಸಭಾ ಕ್ಷೇತ್ರವನ್ನು 75 ದಿನದಲ್ಲಿ ಸಂಚಾರ ಮಾಡುವ ಗುರಿ ಹೊಂದಿದ್ದು, ಜನವರಿ 25ರಂದು ಮೈಸೂರು ಜಿಲ್ಲೆ ಪ್ರವಾಸ ಮುಗಿಯಲಿದೆ. ಜನವರಿ 28ರಂದು ರಥ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ಬೃಹತ್ ರ್ಯಾಲಿ ನಡೆಯಲಿದೆ. ಈ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ಘಟಾನುಘಟಿ ನಾಯಕರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಯಾತ್ರೆ ನಡುವೆ ಜನ ಕುರ್ಚಿ ಬಿಟ್ಟು ಎದ್ದು ಹೋಗಿದ್ದೇಕೆ ಗೊತ್ತಾ?