ಬೆಂಗಳೂರು : ಹಳ್ಳಿಗಳಲ್ಲಿ ನೊಣಗಳ ಕಾಟ ಹೆಚ್ಚಾಗಿರುತ್ತದೆ. ಈ ನೊಣಗಳು ಯಾವ ಮನೆಯಲ್ಲಿ ಹೆಚ್ಚಾಗಿರುತ್ತದೆಯೋ ಆ ಮನೆಯವರು ಯಾವಾಗಲೂ ಅನಾರೋಗ್ಯಕ್ಕೀಡಾಗುತ್ತಿರುತ್ತಾರೆ. ಯಾಕೆಂದರೆ ಈ ನೋಣಗಳಿಂದ ಟೈಪೃಡ್, ಕಾಲರಾ, ಅತಿಸಾರ ಮುಂತಾದ ಕಾಯಿಲೆಗಳು ಹರಡುತ್ತದೆ. ಈ ನೋಣಗಳನ್ನು ಮನೆಯಿಂದ ಓಡಿಸಲು ಹೀಗೆ ಮಾಡಿ.
1 ಗ್ಲಾಸ್ ನೀರಿಗೆ ವೈಟ್ ವಿನೆಗರ್ 1 ಗ್ಲಾಸ್ ಹಾಗು ಚಕ್ಕೆ ಪೌಡರ್ 1ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ಗೆ ಹಾಕಿ ಎಲ್ಲೆಲ್ಲಿ ನೋಣಗಳು ಕಾಣುತ್ತದೆಯೋ ಆ ಜಾಗದಲ್ಲಿ ಸ್ಪ್ರೇ ಮಾಡಿ. ಹೀಗೆ 3-4 ದಿನ ಮಾಡಿದ್ರೆ ನೋಣ ಓಡಿ ಹೋಗುತ್ತದೆ.
ಬೆಳ್ಳುಳ್ಳಿ ಜಜ್ಜಿ 1ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ಗೆ ಹಾಕಿ ನೋಣ ಇದ್ದಕಡೆ ಸ್ಪ್ರೇ ಮಾಡಿ. ಹೀಗೆ ಮಾಡಿದರೆ ಅದರ ವಾಸನೆಗೆ ನೋಣ ಬರುವುದಿಲ್ಲ.
1 ಗ್ಲಾಸ್ ನೀರಿಗೆ ಪೆಪ್ಪರ್ ಮೆಂಟ್ ಆಯಿಲ್ ಅಥವಾ ಪುದೀನ ರಸ 20 ಹನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ಗೆ ಹಾಕಿ ನೋಣ ಇದ್ದಕಡೆ ಸ್ಪ್ರೇ ಮಾಡಿ. ಇದರಿಂದ ನೋಣದ ಕಾಟ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.