ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಿನ್ನೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸಭೆ ಸೇರಲಾಗಿತ್ತು. ವಿಶೇಷ ಆಯುಕ್ತರಾದ ಹರೀಶ್ ಕುಮಾರ್ ಹಾಗು ತ್ರಿಲೋಕ ಚಂದ್ರ ಸಭೆ ಭಾಗಿಯಾಗಿದ್ರು. ಅಷ್ಟೇ ಅಲ್ಲದೇ ಎಲ್ಲ ವಲಯಗಳ ಜೆಸಿ, ಸಿಇ ಹಾಗು ಇಇಗಳು ಕೂಡ ಹಾಜರಿದ್ರು. ಸಭೆಯಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ತೆರವು ವಿಚಾರದಲ್ಲಿ ನಿರ್ಲಕ್ಷ ವಹಿಸದಂತೆ ಸೂಚಿಸಲಾಗಿದೆ. ಇನ್ನು, ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ಕೆರೆಗೆ ಸಂಬಂಧಿಸಿದಂತೆ ಹಾಗು ಕಾಲುವೆಗೆ ಸಂಬಂಧಿಸಿದಂತೆ ಒಂದು ನೋಟಿಫಿಕೇಶನ್ ಹೊರಡಿಸಿದೆ.
ಅದರ ಅನ್ವಯ ಕಾಲುವೆ ಒತ್ತುವರಿ ವಿಚಾರವಾಗಿ ಪ್ರತಿಯೊಂದು ಕಿಲೋಮೀಟರ್ ಒತ್ತುವರಿ ಪತ್ತೆಹಚ್ಚಲು ಒಬ್ಬ ಇಂಜಿನಿಯರ್‌ಗೆ ಜವಾಬ್ದಾರಿ ನೀಡಲಾಗಿದೆ. ಅವರ ನೇತೃತ್ವದಲ್ಲಿ ಯಾರ ಅವಧಿಯಲ್ಲಿ ಕರ್ತವ್ಯ ಲೋಪ ಅಂತ ರಿಪೋರ್ಟ್ ಮಾಡಬೇಕು. ಪೂರ್ಣವಾದ ತೆರವು ರಿಪೋರ್ಟ್ ಹಾಗು ಕರ್ತವ್ಯ ಲೋಪ ರಿಪೋರ್ಟ್ ಪಾಲಿಕೆಗೆ ಸಲ್ಲಿಸಬೇಕು. 10 ದಿನಗಳಲ್ಲಿ ಅವರಿಗೆ ನೀಡಿರೋ ಟಾಸ್ಕ್ ಮಾಡಿಲ್ಲವಾದ್ರೆ ಆ ಎಂಜಿನಿಯರ್ ವಿರುದ್ದ ಕ್ರಮ ಜರುಗಿಸಲಾಗುತ್ತೆ. ಇದೇ ರೀತಿ 10 ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ 3 ದಿನಗಳ ಸಮಯ ನೀಡಲಾಗಿದೆ.