Select Your Language

Notifications

webdunia
webdunia
webdunia
webdunia

ನೋಟಿಸ್‌ ಹಿಂಪಡೆಯೋವರೆಗೂ ಕಚೇರಿಗೆ ಕಾಲಿಡಲ್ಲ

ನೋಟಿಸ್‌ ಹಿಂಪಡೆಯೋವರೆಗೂ ಕಚೇರಿಗೆ ಕಾಲಿಡಲ್ಲ
bangalore , ಶುಕ್ರವಾರ, 1 ಸೆಪ್ಟಂಬರ್ 2023 (15:20 IST)
BJP ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಮಾಜಿ ಶಾಸಕ M.P ರೇಣುಕಾಚಾರ್ಯಗೆ ಬಿಜೆಪಿಯಿಂದ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಒಂದು ವಾರದಲ್ಲಿ ಉತ್ತರಿಸುವಂತೆ ನೋಟಿಸ್‌ ನೀಡಲಾಗಿದೆ. ಆದರೆ, ನಾನು ನೋಟಿಸ್‌ಗೆ ಯಾವುದೇ ಕಾರಣಕ್ಕೂ ಉತ್ತರಿಸಲ್ಲ, ನಾನು ರಾಜ್ಯ ನಾಯಕತ್ವವನ್ನು ಟೀಕಿಸಿರುವುದು ಪಕ್ಷದ ದೃಷ್ಟಿಯಿಂದ ಉತ್ತಮವಾದದ್ದು ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೋಟಿಸ್‌ ವಾಪಸ್‌ ಪಡೆಯುವವರೆಗೂ ನಾನು ಪಕ್ಷದ ಸಭೆಗಳಲ್ಲಿ ಭಾಗವಹಿಸಲ್ಲ ಮತ್ತು ಬಿಜೆಪಿ ಕಚೇರಿಗೆ ಕಾಲಿಡುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ನಾನು ಎತ್ತಿರುವ ಕೆಲವು ವಿಚಾರಗಳನ್ನು ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಿಪಡಿಸಬೇಕು ಎಂಬ ಉದ್ದೇಶದಿಂದ ಮಾತನಾಡಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಡಿಪಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ