Publish Date: Thu, 03 Aug 2017 (15:35 IST)
Updated Date: Thu, 03 Aug 2017 (15:37 IST)
ಐಟಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಡಿಕೆಶಿ ಜ್ಯೋತಿಷಿ ದ್ವಾರಕನಾಥ್ ಯತ್ನಿಸಿದ ಘಟನೆ ಬಯಲಿಗೆ ಬಂದಿದೆ.
ಐಟಿ ಅಧಿಕಾರಿಗಳು ದ್ವಾರಕನಾಥ್ ನಿವಾಸದ ಮೇಲೆ ದಾಳಿ ನಡೆಸಿದಾಗ, ದ್ವಾರಕನಾಥ್ ತಮ್ಮ ಮನೆಯ ಹಿಂದಿನ ಗೇಟ್ ಓಪನ್ ಮಾಡಿ ದಾಖಲೆಗಳನ್ನು ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ಐಟಿ ಅಧಿಕಾರಿಗಳ ದಾಳಿ ಬಳಿಕ ಡಿಕೆಶಿ ಆಪ್ತ ಜ್ಯೋತಿಷಿ ದಾಖಲೆಗಳನ್ನು ಸಾಗಿಸಿದ್ದಾರೆ ಎನ್ನುವ ಮಾಹಿತಿಗಳು ಹಿನ್ನೆಲೆಯಲ್ಲಿ ನಿನ್ನೆ ದ್ವಾರಕನಾಥ್ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಇಂದು ಮತ್ತೆ ಅವರ ನಿವಾಸದ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಜ್ಯೋತಿಷಿ ದ್ವಾರಕನಾಥ್ ಅವರನ್ನು ಮತ್ತಷ್ಟು ವಿಚಾರಣೆಗೆ ನಡೆಸುವ ಸಾಧ್ಯತೆಗಳಿವೆ ಎಂದು ಐಟಿ ಮೂಲಗಳು ತಿಳಿಸಿವೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.