Select Your Language

Notifications

webdunia
webdunia
webdunia
webdunia

ಸಚಿವ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪ್ರತಿರೂಪ: ಎಸ್‌‍.ಆರ್.ಹಿರೇಮಠ

ಸಚಿವ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪ್ರತಿರೂಪ: ಎಸ್‌‍.ಆರ್.ಹಿರೇಮಠ
ಹುಬ್ಬಳ್ಳಿ , ಗುರುವಾರ, 3 ಆಗಸ್ಟ್ 2017 (13:50 IST)
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪ್ರತಿರೂಪವಾಗಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹಿರೇಮಠ ಹೇಳಿದ್ದಾರೆ.
 
ಭ್ರಷ್ಟಾಚಾರವನ್ನೇ ಕಾಯಕವಾಗಿಸಿಕೊಂಡ ಶಿವಕುಮಾರ್ ಸಮಾಜದಲ್ಲಿ ಇರಲು ಅನರ್ಹರು. ಅವರ ನಿವಾಸದ ಮೇಲೆ ನಡೆದ ಐಟಿ ದಾಳಿ ಸ್ವಾಗತಾರ್ಹವಾಗಿದೆ. ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 
ಆದಾಯ ತೆರಿಗೆ ಅಧಿಕಾರಿಗಳು ವ್ಯವಸ್ಥಿತವಾಗಿ ದಾಳಿ ಮಾಡಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬರಲಿದೆ. ಇಂತಹ ಭ್ರಷ್ಟ ಸಚಿವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
 
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಜಂಟಿಯಾಗಿ, ಶಿವಕುಮಾರ್ ಪ್ರಕರಣದಲ್ಲಿ ತನಿಖೆ ನಡೆಸಿದಲ್ಲಿ ಗಣಿಧಣಿ ಜನಾರ್ದನ ರೆಡ್ಡಿಗಾದ ಗತಿಯೇ ಸಚಿವ ಶಿವಕುಮಾರ್‌ಗೆ ಆಗುತ್ತದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧ ಐಟಿ ದಾಳಿ: ಅನಂತ್ ಕುಮಾರ್ ಸಮರ್ಥನೆ