Publish Date: Sat, 16 Mar 2019 (13:17 IST)
Updated Date: Sat, 16 Mar 2019 (13:19 IST)
ಸಚಿವ ಡಿ.ಕೆ.ಶಿವಕುಮಾರ್ ಈ ದೇಶಕಂಡ ಅತೀ ಹೆಚ್ಚು ಭ್ರಷ್ಟರಲ್ಲಿ ಉನ್ನತ ಸ್ಥಾನ ಹೊಂದಿದ್ದಾರೆ. ಹೀಗಂತ ಆರೋಪ ಕೇಳಿಬಂದಿದೆ.
ಗಣಿ ಭಾದಿತ ಜನರ ಮೂಲ ಸೌಕರ್ಯ, ಶಿಕ್ಷಣ, ಅಭಿವೃದ್ಧಿಗಾಗಿ ಮೀಸಲಿಟ್ಟಿರುವ 15 ಸಾವಿರ ಕೋಟಿ ಹಣವನ್ನು ಲೂಟಿ ಮಾಡಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಹೊಣೆ ಹೊತ್ತ ಡಿ.ಕೆ.ಶಿವಕುಮಾರ್ ರವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಅರ್.ಹಿರೇಮಠ, ದೇಶಕಂಡ ಅತೀ ಹೆಚ್ಚು ಭ್ರಷ್ಟರಲ್ಲಿ ಡಿ.ಕೆ.ಶಿ ಕೂಡ ಉನ್ನತ ಸ್ಥಾನ ಹೊಂದಿದ್ದಾರೆ. ಈ ಬಗ್ಗೆ ನಾವು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರ ಅಳಿಯ ಸಿದ್ಧಾರ್ಥ ಹಾಗೂ ಡಿ.ಕೆ.ಶಿ ವಿರುದ್ಧ ಪ್ರಕರಣಗಳು ದಾಖಲಾಗಿ ಸಾಬೀತಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಇದು ಸ್ವಾಗತಾರ್ಹವಾಗಿದೆ ಎಂದರು.
ಗಣಿ ಭಾದಿತರ ಜನರ ಹಣವನ್ನು ಕೊಳ್ಳೆ ಹೊಡೆಯಲು ಬಳ್ಳಾರಿಗೆ ಅಗಮಿಸಿದ ಡಿ.ಕೆ.ಶಿ ಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಸಂಪುಟ ಸ್ಥಾನದಿಂದ ಕೈ ಬಿಡಬೇಕು. ಗಣಿ ಬಾಧಿತರ ಹಣದ ಬಗ್ಗೆ ಪೈಸಾ ಟು ಪೈಸಾ ಲೆಕ್ಕ ಕೇಳುವಲ್ಲಿ ಇಲ್ಲಿನ ಜನರು, ಸಂಘಟನೆಗಳು ಮುಂದಾಗಬೇಕು ಎಂದರು.