Select Your Language

Notifications

webdunia
webdunia
webdunia
webdunia

ಬೊಮ್ಮಾಯಿಗೆ ತಿರುಗೇಟು ನೀಡಿದ ಡಿಕೆಶಿ

ಬೊಮ್ಮಾಯಿಗೆ ತಿರುಗೇಟು ನೀಡಿದ ಡಿಕೆಶಿ
bangalore , ಮಂಗಳವಾರ, 19 ಸೆಪ್ಟಂಬರ್ 2023 (14:00 IST)
ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡಬಾರದು.ಬಿಟ್ರೆ ಕಾನೂನು ಹೋರಾಟ ಮಾಡಿ ಎಂಬ ಬೊಮ್ಮಾಯಿ ಹೇಳೀಕೆಗೆ ಡಿಸಿಎಂ ಡಿಕೆಶಿವಕುಮಾರ್ ತಿರುಗೇಟು ನೀಡಿದ್ದಾರೆ.
 
ಬೊಮ್ಮಯಿ ಅವರ ಸಲಹೆಯನ್ನು ಪಡೆದುಕೊಳ್ಳುತ್ತೇನೆ.ಬೊಮ್ಮಾಯಿ ಸಲಹೆಯನ್ನ ಒಪ್ಪುತ್ತೇನೆ.ಹಾಗಾದ್ರೆ ಅವರ ಸರ್ಕಾರ ಇದ್ದಾಗ ಏನು ಮಾಡಿದ್ರು.?ರಾತೋರಾತ್ರಿ ನೀರು ಬಿಟ್ಟಿಲ್ವಾ..?ನಾಡಿದ್ದು ಕೋರ್ಟ್ ಮುಂದೆ ಹೋಗಬೇಕು.ನೀರು ಬಿಡಲು ನಮಗೆ ಇಷ್ಟವಿಲ್ಲ.ಆದ್ರೆ ಕೋರ್ಟ್ ಸೂಚನೆಯನ್ನು ಗಮನದಲ್ಲಿಡಬೇಕು.ಅದಕ್ಕೆ ನಾನು ದೆಹಲಿಗೆ ಹೋಗ್ತಿದ್ದೇನೆ.ಪಾರ್ಲಿಮೆಂಟ್ ಸದಸ್ಯರನ್ನ ಭೇಟಿ ಮಾಡ್ತೇನೆ.ಕೇಂದ್ರದ ಮೇಲೆ ನಾವೆಲ್ಲರೂ ಒತ್ತಡ ಹಾಕುತ್ತೇವೆ.ಸುಪ್ರೀಂ ಕೋರ್ಟ್ ನೀರು ಬಿಡಿ ಅಂದಿದೆ. ನಾವೇನು ಮಾಡೋಕೆ ಆಗುತ್ತೆ. ಬೊಮ್ಮಾಯಿ ಏನು ಮಾಡೋಕೆ ಆಗುತ್ತೆ.ನಾವೆಲ್ಲರೂ ಸುಪ್ರೀಂ ಗೆ ಗೌರವ ಕೊಡಬೇಕು.ನಮ್ಮ ಪರಿಸ್ಥಿತಿಯನ್ನ ಸುಪ್ರೀಂ ತಿಳಿಸಬೇಕು.ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು.ಅವರಿಂದ ಸಲಹೆ ಕೊಡಬೇಕು.ರಾಜಕಾರಣ ಪಕ್ಕಕ್ಕಿಟ್ಟು ಜನರ ಹಿತ ಕಾಪಾಡಬೇಕು.ದೇವೇಗೌಡರು ಪಾರ್ಲಿಮೆಂಟ್ ನಲ್ಲಿ ಇದ್ದಾರೆ.ಅವರ ಸಲಹೆ ಕೂಡ ಬಹಳ ಮುಖ್ಯ.ಬಹಳ ಹಿರಿತನದ ಅನುಭವ ಅವರದು,ಬೊಮ್ಮಾಯಿ ನೀರಾವರಿ ಸಚಿವರಾಗಿದ್ರು, ಸಿಎಂ ಆದ್ರು.ಅವರು ನೇಮಕ ಮಾಡಿದ ತಜ್ಞರೇ ಇರೋದು,ಮೊದಲು ದೆಹಲಿಗೆ ನಡೆಯಿರಿ. ನಿಮ್ಮ ಅಧಿಕಾರ ಬಳಸಿ ರಾಜ್ಯದ ಹಿತ ಕಾಪಾಡಿ ಎಂದು ಬೊಮ್ಮಾಯಿಗೆ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ