Webdunia - Bharat's app for daily news and videos

Install App

ನಿಮ್ಮಂಗೆ ನಾನು ಅಣ್ಣನಿಗೆ ಕೈ ಕೊಡಲ್ಲ ಕುಮಾರಸ್ವಾಮಿ: ಸಾವಲ್ಲೂ ಅಣ್ಣನ ಜೊತೆ ಎಂದ ಡಿಕೆ ಸುರೇಶ್

Krishnaveni K
ಸೋಮವಾರ, 11 ನವೆಂಬರ್ 2024 (15:13 IST)
ಚನ್ನಪಟ್ಟಣ: ಉಪಚುನಾವಣೆ ಪ್ರಚಾರ ಭಾಷಣದಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ. ನಿಮ್ಮಂಗೆ ನಾನು ನಮ್ಮಣ್ಣಗೆ ಕೈ ಕೊಡಲ್ಲ ಎಂದಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಈ ಹಿಂದೆ ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಂದಾಗ ನಾನು ಬೇರೆ, ನನ್ನ ಕುಟುಂಬ ಬೇರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅವರ ವಿವಾದದಲ್ಲಿ ನನ್ನನ್ನು ಎಳೆದು ತರಬೇಡಿ ಎಂದಿದ್ದರು. ಅದನ್ನೇ ಉದ್ದೇಶಿಸಿ ಇಂದು ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.

ನನ್ನ ಮತ್ತು ನಮ್ಮ ಅಣ್ಣ ಡಿಕೆ ಶಿವಕುಮಾರ್ ಅವರದ್ದು ಅಪೂರ್ವ ಸಹೋದರರು ಎಂದು ಕುಮಾರಸ್ವಾಮಿಯವರು ವ್ಯಂಗ್ಯ ಮಾಡುತ್ತಾರೆ. ಹೌದ್ರೀ ನಾವು ಅಪೂರ್ವ ಸಹೋದರರೇ. ನಾನು ನಿಮ್ಮ ಹಾಗೆ ಕಷ್ಟದ ಸಮಯದಲ್ಲಿ ನನ್ನ ಅಣ್ಣನಿಗೆ ಕೈ ಕೊಡುವ ವ್ಯಕ್ತಿ ಅಲ್ಲ. ನಾವು ಬದುಕಿದ್ದಾಗಲೂ ಜೊತೆಗೇ ಇರ್ತೀವಿ, ಸಾವಿನಲ್ಲೂ ಜೊತೆಗೇ ಇರ್ತೀವಿ. ನನ್ನ ಅಣ್ಣನ ಜೊತೆಗೆ ನಾನು ಯಾವತ್ತೂ ಇರುತ್ತೇವೆ.

ನಿಮ್ಮ ಹಾಗೆ ಕಷ್ಟ ಬಂದಾಗ ನಾನು ಬೇರೆ ನಮ್ಮ ಅಣ್ಣ ಬೇರೆ ಫ್ಯಾಮಿಲಿ ಎನ್ನಲ್ಲ. ದೇವೇಗೌಡರೇ ನಿಮ್ಮ ಮೊಮ್ಮಕ್ಕಳಿಂದ ಹಾಸನದ ಹೆಣ್ಣು ಮಕ್ಕಳು ಮಾನ ಕಳೆದುಕೊಂಡರಲ್ಲಾ ಆಗ ನೀವು ಕಣ್ಣೀರು ಹಾಕಬೇಕಿತ್ತು. ಆಗ ನಿಮ್ಮ ಘನತೆ ಹೆಚ್ಚುತ್ತಿತ್ತು. ನಿಮ್ಮ ಮನೆಯಲ್ಲಿ ಹೊತ್ತಿನ ಊಟಕ್ಕಾಗಿ ಕೆಲಸ ಮಾಡುತ್ತಿದ್ದರಲ್ಲಾ, ಆ ಹೆಂಗಸರ ಮಾನಭಂಗ ಮಾಡಿದಾಗ ಕಣ್ಣೀರು ಹಾಕಬೇಕಿತ್ತು ಎಂದು ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫೇಸ್ ಬುಕ್‌ನಲ್ಲಿ ವಿಡಿಯೋ ಹಂಚಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಮರಳು ಗಣಿಗಾರಿಕೆ ವೀಕ್ಷಿಸಲು ಹೋದ ವಿಜಯೇಂದ್ರಗೆ ಖರ್ಗೆ ಬೆಂಬಲಿಗರಿಂದ ಅಡ್ಡಿ: ಬಿಜೆಪಿ ಕೆಂಡಾಮಂಡಲ

ನಾಯಿಗಾಗಿ ಹೆತ್ತು, ಹೊತ್ತ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರಿ ಮಗ

ಪ್ರಿಯತಮ ಜತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ, ಎಸ್ಕೇಪ್ ಆಗಲು ಮಾಡಿದ ನಾಟಕ ಕೇಳಿದ್ರೆ ಶಾಕ್ ಆಗ್ತೀರಾ

Sukma Naxals Surrendered: 22 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣು

ಮುಂದಿನ ಸುದ್ದಿ