Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಗೆ ತಾತನಾದ ಖುಷಿ: ಮಗುವನ್ನು ಕೈಯಲ್ಲಿ ಎತ್ತಿ ಸಂಭ್ರಮಿಸಿದ ಡಿಸಿಎಂ

DK Shivakumar
Photo Credit: Instagram
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ತಾತನಾದ ಸಂಭ್ರಮದಲ್ಲಿದ್ದಾರೆ. ಆಸ್ಪತ್ರೆಗೆ ಓಡೋಡಿ ಬಂದ ಡಿಕೆಶಿ ಮೊಮ್ಮಗುವನ್ನು ಕೈಯಲ್ಲಿ ಎತ್ತಿ ಖುಷಿಪಟ್ಟಿದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ತಿಳಿದು ಡಿಕೆಶಿ ತಮ್ಮ ಸಾರ್ವಜನಿಕ ಕಾರ್ಯಕ್ರಮವನ್ನೆಲ್ಲಾ ಬದಿಗೊತ್ತಿ ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ.

ಮೊಮ್ಮಗುವನ್ನು ಕೈಯಲ್ಲಿ ಹಿಡಿದು ಡಿಕೆಶಿ ಸಂಭ್ರಮಿಸಿದ್ದಾರೆ. 2021 ರಲ್ಲಿ ಡಿಕೆಶಿ ಪುತ್ರಿ ಐಶ್ವರ್ಯಾ ಕೆಫೆ ಕಾಫಿ ಡೇ ಮುಖ್ಯಸ್ಥ ದಿವಂಗತ ವಿಜಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ ಮದುವೆಯಾಗಿ ಐದು ವರ್ಷಗಳ ಬಳಿಕ ದಂಪತಿ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಭ್ರಮ ಎರಡೂ ಕುಟುಂಬದವರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ಸಿನವರನ್ನು ಕಟೆಕಟೆಯಲ್ಲಿ ನಿಲ್ಲಿಸಿ: ಬಸವರಾಜ ಬೊಮ್ಮಾಯಿ