Select Your Language

Notifications

webdunia
webdunia
webdunia
webdunia

ರಸ್ತೆಗೆ ಡಾಂಬರು ಹಾಕ್ತಿದ್ದೀವಿ ನೋಡ್ಕೊಳ್ಳಿ ಎಂದ ಡಿಕೆ ಶಿವಕುಮಾರ್

Bangalore Roads

Krishnaveni K

ಬೆಂಗಳೂರು , ಬುಧವಾರ, 15 ಅಕ್ಟೋಬರ್ 2025 (11:08 IST)
ಬೆಂಗಳೂರು: ಬೆಂಗಳೂರು ರಸ್ತೆ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಷಾ ಟ್ವೀಟ್ ಮಾಡಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಕ್ಕೆ ಈಗ ಡಿಕೆ ಶಿವಕುಮಾರ್ ಫೋಟೋ ಸಮೇತ ತಿರುಗೇಟು ನೀಡಿದ್ದಾರೆ.

ಬಯೋಕಾನ್ ಗೆ ಭೇಟಿ ನೀಡಿದ್ದ ವಿದೇಶೀ ಸಂದರ್ಶಕರೊಬ್ಬರು ಬೆಂಗಳೂರಿನ ರಸ್ತೆ ಯಾಕೆ ಹೀಗಿದೆ ಎಂದು ಪ್ರಶ್ನೆ ಮಾಡಿದರು. ಯಾಕೆ ಇಲ್ಲಿನ ರಸ್ತೆಗಳು ಇಷ್ಟು ಕೆಟ್ಟದಾಗಿವೆ, ಸರ್ಕಾರ ಹೂಡಿಕೆ ದಾರರಿಗೆ ಬೆಂಬಲ ನೀಡುತ್ತಿಲ್ಲವೇ? ಎಂದು ನನ್ನ ಕೇಳಿದರು ಎಂದು ಕಿರಣ್ ಮಜುಂದಾರ್ ಷಾ ಟ್ವೀಟ್ ಮಾಡಿ ಟೀಕಿಸಿದ್ದರು.

ಇದಕ್ಕೆ ಕಿರಣ್ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದರು. ಇದೇ ಮಾತನ್ನು ಬೇರೆ ರಾಜ್ಯದಲ್ಲಿ ಹೇಳಿದ್ದರೆ ಜೈಲಿಗೆ ಹಾಕುತ್ತಿದ್ದರು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದೀಗ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಜೊತೆಗೆ ‘ಸುಗಮ ಸಂಚಾರವೇ ಸರ್ಕಾರದ ಮೊದಲ ಆದ್ಯತೆ! ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ, ನಗರದ ವಿವಿಧೆಡೆ ರಸ್ತೆಗೆ ಡಾಂಬರೀಕರಣ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕಾಗಿ ಸಾಗಿದೆ’ ಎಂದು ಕಿರಣ್ ಮಜುಂದಾರ್ ಗೆ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಗಬೇಕೆಂದುಕೊಂಡಿರುವ ಡಿಕೆ ಶಿವಕುಮಾರ್ ಗೆ ಹಾಸನಾಂಬೆ ಕೊಟ್ಟ ಸೂಚನೆ ಏನು