ನೋಡ್ರಪ್ಪಾ ಎಚ್ ಡಿ ಕುಮಾರಸ್ವಾಮಿ ಮಾತ್ರ ಗಂಡಸು, ನಾವೆಲ್ಲಾ ಅಲ್ಲ: ಡಿಕೆ ಶಿವಕುಮಾರ್

Krishnaveni K
ಶನಿವಾರ, 10 ಆಗಸ್ಟ್ 2024 (17:40 IST)
ಬೆಂಗಳೂರು: ಬಿಜೆಪಿ ಜೆಡಿಎಸ್ ಪಾದಯಾತ್ರೆ ಈಗ ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕುಮಾರಸ್ವಾಮಿ ಒಬ್ಬರೇ ಗಂಡಸು ನಾವೆಲ್ಲಾ ಅಲ್ಲ ಎಂದು ಇಂದು ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.

ಇಬ್ಬರೂ ನಾಯಕರು ಗಂಡಸ್ತನದ ಬಗ್ಗೆ ಹೇಳಿಕೆ, ತಿರುಗೇಟು ಕೊಟ್ಟುಕೊಂಡಿದ್ದಾರೆ. ರಾಜಕೀಯ ಮಾಡಿದರೆ ಗಂಡಸ್ತನದ ರಾಜಕೀಯ ಮಾಡಬೇಕು ಎಂದು ಎಚ್ ಡಿ ಕುಮಾರಸ್ವಾಮಿ ನಿನ್ನೆ ಹೇಳಿದ್ದರು. ಅದಕ್ಕೆ ಇಂದು ಡಿಕೆ ಶಿವಕುಮಾರ್ ಅವರದೇ ಶೈಲಿಯಲ್ಲಿ ತಿರುಗೇಟನ್ನು ನೀಡಿದ್ದಾರೆ.

‘ನೋಡ್ರಪ್ಪಾ ಕುಮಾರಸ್ವಾಮಿ ಒಬ್ಬರೇ ಗಂಡಸರು, ನಾವೆಲ್ಲಾ ಗಂಡಸರಲ್ಲ. ಅವರ ಗಂಡಸ್ತನ ಎಂತಹದ್ದು ಎಂದು ಹಾಸನದಲ್ಲಿ ಪೆನ್ ಡ್ರೈವ್ ನಲ್ಲಿ ಓಡಾಡ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ನಾನು ಪೆನ್ ಡ್ರೈವ್ ಹಂಚಿದ್ದು ಎಂದು ಸುಳ್ಳು ಪ್ರಚಾರ ಮಾಡಿದರು. ಅವರೇ ಅವರ ಮನೆ ಮಗನ ಪೆನ್ ಡ್ರೈವ್ ಹಂಚಿದ್ದು. ಈ ಹಿಂದೆ ಅಮಿತ್ ಶಾ, ಮೋದಿ ಬಗ್ಗೆ ಏನೆಲ್ಲಾ ಹೇಳಿದರು ಎಂದು ನಮಗೆ ಗೊತ್ತಿಲ್ವಾ? ಎಂದು ಡಿಕೆಶಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗ ಮಗ ಸೋತ ಎಂಬ ಕಾರಣಕ್ಕೆ ನಮ್ಮ ಮೇಲೆ ಗದಾಪ್ರಹಾರ ಮಾಡಿದ್ರು. ನಾನು ಎಂದಿಗೂ ನೇರಾ ನೇರ ಯುದ್ಧ ಮಾಡುವವನು. ಹಿಂದಿನಿಂದ ಒಂದು ರಾಜಕಾರಣ ಮಾಡಿಲ್ಲ. ಕುಮಾರಸ್ವಾಮಿಯವರ ಈ ಹಿಂದೆ ಮಿಲಿಟರಿಯವರು ನಮ್ಮನ್ನು ಜೈಲಿಗೆ ಕರ್ಕೊಂಡು ಹೋಗ್ತಾರೆ ಎಂದರು, ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments