Select Your Language

Notifications

webdunia
webdunia
webdunia
webdunia

ಹಾಲಿನ ದರ ಇನ್ನೂ ಜಾಸ್ತಿ ಮಾಡಬೇಕಿತ್ತು: ಡಿಕೆ ಶಿವಕುಮಾರ್

DK Shivakumar

Krishnaveni K

ಬೆಂಗಳೂರು , ಬುಧವಾರ, 26 ಜೂನ್ 2024 (14:20 IST)
ಬೆಂಗಳೂರು: ಈಗಾಗಲೇ ಜನ ಹಾಲಿನ ದರ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಇಷ್ಟೂ ಸಾಲದು ಇನ್ನೂ ಹೆಚ್ಚು ಮಾಡಬೇಕಿತ್ತು ಎಂದಿದ್ದಾರೆ.

ಯಾರು ಬೇಕಾದರೂ ಬೈಯಲಿ, ವಿರೋಧ ಮಾಡಲಿ ನನ್ನ ಪ್ರಕಾರ ಹಾಲಿನ ದರ ಇನ್ನೂ ಹೆಚ್ಚು ಮಾಡಬೇಕಿತ್ತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ರೀತಿಯಾಗಿ ಅವರು ಹಾಲಿನ ದರ ಏರಿಕೆ ಮಾಡಿದ ಕೆಂಎಎಫ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಹಾಲಿನ ದರ ಏರಿಕೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿಯವರು ರೈತ ವಿರೋಧಿಗಳು ಎಂದು ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ. ಹಾಲಿನ ದರ ಏರಿಕೆ ಮಾಡಿದರೆ ಅದು ರೈತರಿಗೆ ತಲುಪುತ್ತದೆ. ಈಗ ಏರಿಕೆ ಮಾಡಲಾಗಿರುವ 2 ರೂ. ರೈತರಿಗೆ ತಲುಪುತ್ತದೆ. ಹೀಗಾಗಿ ಇದಕ್ಕೆ ವಿರೋಧ ಮಾಡುತ್ತಿರುವ ಬಿಜೆಪಿಯವರು ರೈತರ ಪರ ಅಲ್ಲ ಎಂದಿದ್ದಾರೆ.

ಕೆಎಂಎಫ್ ಎಂದರೆ ರೈತರ ಒಕ್ಕೂಟ. ಹೀಗಾಗಿ ಇಲ್ಲಿ ಹಾಲಿನ ದರ ಏರಿಕೆ ಮಾಡಿದರೆ ಅದು ರೈತರಿಗೆ ಹೋಗುತ್ತದೆಯೇ ಹೊರತು ಅದರ ಅಧ್ಯಕ್ಷರಿಗೆ ಲಾಭವಾಗಲ್ಲ. ಕೆಎಂಎಫ್ ಉಳಿಯಬೇಕು. ಅಲ್ಲಿ ಇರೋದು ರೈತರೇ ಹೊರತು ವರ್ತಕರಲ್ಲ. ಯಾರು ಬೇಕಾದರೂ ವಿರೋಧ ಮಾಡಲಿ. ಹಾಲಿನ ದರ ನನ್ನ ಪ್ರಕಾರ ಇನ್ನೂ ಏರಿಕೆಯಾಗಬೇಕಿತ್ತು. ಬೇಕಿದ್ದರೆ ರೈತರನ್ನೇ ಹೋಗಿ ಕೇಳಲಿ. ರೈತರು ಹಸು ಸಾಕಲಾಗದೇ ಮಾರಾಟ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ಎಂದು ಬಿಜೆಪಿಯವರು ನೋಡಲಿ ಎಂದು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸಿಬಿಐ ಕುಣಿಕೆ