Select Your Language

Notifications

webdunia
webdunia
webdunia
Saturday, 8 March 2025
webdunia

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಡಿ.ಕೆ.ಶಿವಕುಮಾರ್

ದೇವೇಗೌಡರ ಕಾಲಿಗೆ ನಮಸ್ಕರಿಸಿದ ಡಿ.ಕೆ.ಶಿವಕುಮಾರ್
ಬೆಂಗಳೂರು , ಮಂಗಳವಾರ, 27 ಜೂನ್ 2017 (13:59 IST)
ಬದ್ಧವೈರಿಗಳೂ ಕೆಲವು ಬಾರಿ ಪರಸ್ಪರ ಒಂದಾಗುತ್ತಾರೆ ಎನ್ನುವುದು ಸಾಬೀತಾಗಿದೆ. ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್, ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲಿಗೆ ನಮಸ್ಕರಿಸಿದ ಘಟನೆ ನಡೆಯಿತು.
 
ನಾಡಪ್ರಭು ಕೆಂಪೇಗೌಡರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಶಿವಕುಮಾರ್, ವೇದಿಕೆಯ ಮೇಲಿದ್ದ ಸ್ವಾಮಿಗಳು, ದೇವೇಗೌಡರು ಸೇರಿದಂತೆ ಹಿರಿಯರು, ಗಣ್ಯರಿಗೆ ನಮಸ್ಕರಿಸಿದರು.  
 
ಹಲವಾರು ವರ್ಷಗಳಿಂದ ಪರಸ್ಪರ ಕತ್ತಿ ಮಸೆಯುತ್ತಿರುವ ದೇವೇಗೌಡರ ಕುಟುಂಬ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ವೈಮನಸ್ಸು ಜಗಜ್ಜಾಹಿರವಾಗಿದೆ. ಆದರೆ, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ ಎನ್ನುವುದು ಸಚಿವ ಶಿವಕುಮಾರ್ ಸಾಬೀತುಪಡಿಸಿದ್ದಾರೆ.
 
ಇಂಧ ಖಾತೆ ಸಚಿವ ಡಿ.ಕೆ.ಶಿವಕುಮಾರ್ ದೇವೇಗೌಡರ ಕಾಲಿಗೆ ನಮಸ್ಕರಿಸಿರುವುದು ಉತ್ಸವದಲ್ಲಿ ಪಾಲ್ಗೊಂಡಿದ್ದ ಸಭಿಕರಿಗೆ ಅಚ್ಚರಿ ಮೂಡಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದ ಮನೆಯ ಯುವಕ ಆ ಮಹಿಳೆಯ ತಲೆಗೆ ಗನ್ನಿಟ್ಟು ಮಾಡಿದ್ದೇನು ಗೊತ್ತಾ..?