Publish Date: Wed, 09 Aug 2017 (11:47 IST)
Updated Date: Wed, 09 Aug 2017 (11:50 IST)
ಬೆಂಗಳೂರು: ಗುಜರಾತ್ ಶಾಸಕರನ್ನು ರೆಸಾರ್ಟ್ ನಲ್ಲಿ ಸುರಕ್ಷಿತವಾಗಿ ಇಟ್ಟು, ಕೊನೆಗೆ ಗುಜರಾತ್ ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹಮ್ಮದ್ ಪಟೇಲ್ ಗೆಲುವಿಗೆ ಕಾರಣರಾಗಿದ್ದ ಸಚಿವ ಡಿಕೆ ಶಿವಕುಮಾರ್ ಗೆ ಶಾಕ್ ಎದುರಾಗಿದೆ.
ವಿಚಾರಣೆಯ ಭಾಗವಾಗಿ ಐಟಿ ಇಲಾಖೆ ಡಿಕೆಶಿ ಮತ್ತು ಕುಟುಂಬದವರಿಗೆ ಸೇರಿದ 25 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ಮೊನ್ನೆಯಷ್ಟೇ ಐಟಿ ಇಲಾಖೆ ಅಧಿಕಾರಿಗಳು ಡಿಕೆಶಿ ಮತ್ತು ಅವರ ಆಪ್ತರ ನಿವಾಸದಲ್ಲಿ ನಾಲ್ಕು ದಿನಗಳ ಕಾಲ ಪರಿಶೀಲನೆ ನಡೆಸಿತ್ತು.
ಇದೀಗ ಬ್ಯಾಂಕ್ ವ್ಯವಹಾರಗಳ ತನಿಖೆ ನಡೆಸಲು ಐಟಿ ಇಲಾಖೆ ಡಿಕೆ ಶಿವಕುಮಾರ್, ಪತ್ನಿ, ಮಕ್ಕಳು ಸೇರಿದಂತೆ ಕುಟುಂಬಸ್ಥರ ಸುಮಾರು 25 ಬ್ಯಾಂಕ್ ಖಾತೆಗಳನ್ನು ತಡೆಹಿಡಿದಿದೆ ಎಂದು ಖಾಸಗಿ ವಾಹಿನಿ ಹೇಳಿದೆ. ಉಳಿದ ಎರಡು ಖಾತೆಗಳ ಮಾಹಿತಿ ಪಡೆದು ನಂತರ ಸದ್ಯದ ಮಟ್ಟಿಗೆ ಬಳಕೆಗೆ ಅನುಮತಿ ನೀಡಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.